ಹೊಸಪೇಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಿಸಿಎಂ ಇಲಾಖೆ ಕಚೇರಿ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿನ ಹಣದ ಚೀಲವನ್ನು ಕಳ್ಳನೊಬ್ಬ ಎಗರಿಸಿಕೊಂಡು (Money theft) ಹೋಗಿರುವ ಘಟನೆ ನಡೆದಿದೆ.
ಹೊಸಹಳ್ಳಿ ಗ್ರಾಮದ ಎಚ್.ಬಿ. ವೀರಭದ್ರಪ್ಪ ಅವರು ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹಾಗೂ ಪಿಜಿಬಿ ಬ್ಯಾಂಕಿನಲ್ಲಿ ಒಟ್ಟು 10.50 ಲಕ್ಷ ರೂಪಾಯಿಗಳನ್ನು ಬಿಡಿಸಿಕೊಂಡು ಕಾರಿನಲ್ಲಿಟ್ಟುಕೊಂಡು ಪಟ್ಟಣದಲ್ಲಿನ ಬಿಸಿಎಂ ಇಲಾಖೆ ಕಚೇರಿ ಬಳಿ ನಿಲ್ಲಿಸಿ ಅಧಿಕಾರಿಗಳನ್ನು ಕಾಣಲು ಕಚೇರಿ ಒಳಗೆ ಹೋಗಿದ್ದಾರೆ.
ಈ ವೇಳೆ ಕಳ್ಳನೊಬ್ಬ ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದ 10.50 ಲಕ್ಷ ರೂಪಾಯಿಗಳಿದ್ದ ಬ್ಯಾಗನ್ನು ಎತ್ತಿಕೊಂಡು ಹೋಗಿದ್ದಾನೆ. ನಂತರ ಕಚೇರಿಯಿಂದ ವೀರಭದ್ರಪ್ಪ ಹೊರ ಬಂದು ಕಾರು ಹತ್ತಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್. ಶ್ರೀ ಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಷಾರು ಎಚ್ಚರವಿರಲಿ: ಕಳ್ಳರು ಯಾವೆಲ್ಲ ಬಗೆಯಲ್ಲಿ ಹೊಂಚು ಹಾಕಿ ಕುಳಿತಿರುತ್ತಾರೆ ಎಂದು ಹೇಳುವುದೇ ಕಷ್ಟವಾಗಿದೆ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ರವಾನೆ ಮಾಡುವಾಗ ಭಾರಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದರಲ್ಲೂ ಬ್ಯಾಂಕ್‌ನಿಂದ ಹಣ ಪಡೆದುಕೊಂಡು ಹೋಗುವವರು, ನಿತ್ಯ ಬ್ಯಾಂಕ್‌ಗೆ ಹಣ ಜಮಾ ಮಾಡುವವರು ತುಂಬಾ ಜಾಗೃತೆ ವಹಿಸಬೇಕು.
ಇದನ್ನೂ ಓದಿ | Theft Case | ತಹಸೀಲ್ದಾರ್ ಮನೆಗೇ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದರು!