ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವರ್ಗಿ ಮಾಡಲಾಗಿದೆ. 11 ಮಂದಿ ಐಪಿಎಸ್ ಅಧಿಕಾರಿ ಗಳು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪೈಕಿ ಏಳು ಅಧಿಕಾರಿಗಳು ವರ್ಗಾವಣೆಯಾದರೆ, ನಾಲ್ಕು ಅಧಿಕಾರಿಗಳು ಮುಂಬಡ್ತಿ ನೀಡಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ವರ್ಗಾವಣೆಯಾಗಿದ್ದು, ಈ ಜಾಗಕ್ಕೆ ಬಿ.ರಮೇಶ್ ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದಾರೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ವಿಶೇಷ ಆಯುಕ್ತ ಹುದ್ದೆ ಸೃಷ್ಟಿಸಿ, ಅಬ್ದುಲ್ ಸಲೀಂ ಅವರನ್ನು ಆ ಹುದ್ದೆಗೆ ನೇಮಿಸಲಾಗಿದೆ.
ವರ್ಗಾವಣೆಯಾದ ಅಧಿಕಾರಿಗಳು
೧. ಅಬ್ದುಲ್ ಸಲೀಂ ಎಡಿಜಿಪಿ, ವಿಶೇಷ ಆಯುಕ್ತ, ಬೆಂಗಳೂರು ನಗರ ಟ್ರಾಫಿಕ್
೨. ಉಮೇಶ್ ಕುಮಾರ್ – ಆಡಳಿತ ವಿಭಾಗ, ಎಡಿಜಿಪಿ ಬೆಂಗಳೂರು ಕೇಂದ್ರ ಕಚೇರಿ
೩. ದೇವಜ್ಯೋತಿ ರೈ, ಐಜಿಪಿ, ಮಾನವ ಹಕ್ಕು ಆಯೋಗ
೪. ರಮಣ ಗುಪ್ತಾ – ಐಜಿಪಿ, ಗುಪ್ತಚರ, ಬೆಂಗಳೂರು ನಗರ
೫. ಡಾ. ಬಿ.ಆರ್. ರವಿಕಾಂತೇಗೌಡ – ಐಜಿ, ಸಿಐಡಿ
೬. ಬಿ.ಎಸ್.ಲೋಕೇಶ್ ಕುಮಾರ್ – ಐಜಿ ಬಳ್ಳಾರಿ ವಲಯ
೭. ಚಂದ್ರಗುಪ್ತ – ಐಜಿ, ಮಂಗಳೂರು ಪಶ್ಚಿಮ ವಲಯ
ಬಡ್ತಿ ಪಡೆದ ಅಧಿಕಾರಿಗಳು
೧. ಡಾ.ಶರಣಪ್ಪ – ಐಜಿ, ಸಿಸಿಬಿ ಬೆಂಗಳೂರು
೨. ಡಾ.ಎಂ.ಎನ್.ಅನುಚೇತ್ – ಐಜಿ, ಬೆಂಗಳೂರು ಟ್ರಾಫಿಕ್ ಕಮಿಷನರ್
೩. ವಿ.ಡಿ ಚೆನ್ನಣ್ಣನವರ್ ವ್ಯವಸ್ಥಾಪಕ ನಿರ್ದೇಶಕ, ಕಿಯೋನಿಕ್ಸ್
೪. ರಮೇಶ್ ಮಂಗಳೂರು ಕಮಿಷನರ್
ಹಿಂದಿನ ವರ್ಗಾವಣೆ ಸುದ್ದಿ | IAS Officers Transfer | ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರಕಾರ