ಮೈಸೂರು: 7ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಕೆರೆಗೆ ಹಾರಿ ಆತ್ಮಹತ್ಯೆ (Girl Died)ಮಾಡಿಕೊಂಡಿದ್ದಾಳೆ. ಗೀತಾ ಮೃತ ಬಾಲಕಿಯಾಗಿದ್ದು, ಈಕೆ ಹಲವು ದಿನಗಳಿಂದಲೂ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಈ ನೋವಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯ ನುರಿತ ಈಜುಗಾರರು, ಅಗ್ನಿಶಾಮಕದಳದ ಸಿಬ್ಬಂದಿ ಬಾಲಕಿಯ ಶವವನ್ನು ಹೊರಗೆ ತೆಗೆದಿದ್ದಾರೆ.
ನಂಜನಗೂಡಿನ ಹುರ ಎಂಬ ಗ್ರಾಮದ ನಿವಾಸಿಯಾಗಿದ್ದ ಬಾಲಕಿ ಗೀತಾಗೆ ಈಗ 12 ವರ್ಷ. ವೆಂಕಟನಾಯಕ ಎಂಬುವರು ಪುತ್ರಿ. ಆಕೆಗೆ ಪದೇಪದೆ ತೀವ್ರ ಹೊಟ್ಟೆನೋವು ಬರುತ್ತಿತ್ತು. ಆ ನೋವು ಬಂದರೆ ಆಕೆಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಇದರಿಂದ ಗೀತಾ ಬಳಲಿದ್ದಳು. ಅಪ್ಪ-ಅಮ್ಮನ ಎದುರೂ ನೋವನ್ನು ಹೇಳಿಕೊಂಡಿದ್ದಳು. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಓದುತ್ತಿದ್ದ ಈಕೆ, ಸೋಮವಾರ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿ ಕೆರೆಗೆ ಹಾರಿದ್ದಾಳೆ. ತಮ್ಮ ಮಗಳು ಹೊಟ್ಟೆನೋವು ತಾಳಲಾರೆದೆಯೇ ಸತ್ತಿದ್ದಾಳೆ ಎಂದು ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ್ದಾರೆ. ಹಾಗೇ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ.
ಇದನ್ನೂ ಓದಿ: Contaminated Water: ಕೊಪ್ಪಳದಲ್ಲಿ ವಾಂತಿ, ಭೇದಿಗೆ ಬಾಲಕಿ ಬಲಿ: ಸಾವಿನ ಸಂಖ್ಯೆ ಮೂರಕ್ಕೇರಿಕೆ, ಹೆಚ್ಚಿದ ಆತಂಕ