Site icon Vistara News

Accident News | ಕಾರು- ಟಿಪ್ಪರ್‌ ನಡುವೆ ಅಪಘಾತ: 13 ಕೂಲಿ ಕಾರ್ಮಿಕರಿಗೆ ಗಾಯ

malur accident

ಕೋಲಾರ: ಮಾಲೂರು ತಾಲೂಕಿನ ಹೂಸೂರು ಮುಖ್ಯ ರಸ್ತೆಯ ಚಿಕ್ಕ ತಿರುಪತಿ ಕ್ರಾಸ್ ಬಳಿ ಗುರುವಾರ ನಡೆದ ಅಪಘಾತದಲ್ಲಿ ೧೩ ಮಂದಿ ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಟಾಟಾ ಸುಮೋ ಮತ್ತು ಟಿಪ್ಪರ್‌ಗಳ ನಡುವೆ ಡಿಕ್ಕಿ ಸಂಭವಿಸಿದೆ. ಕೂಲಿ ಕಾರ್ಮಿಕರು ತಮಿಳುನಾಡಿನ ಬೇರಿಕೆ ಅಮದಗೊಂಡನಹಳ್ಳಿ ಗ್ರಾಮದವರಾಗಿದ್ದು, ಮಾಲೂರು ತಾಲೂಕಿನಲ್ಲಿ ಕೂಲಿ ಮಾಡಲು ಆಗಮಿಸುತ್ತಿದ್ದರು. ಗಾಯಗೊಂಡವರನ್ನು ಮಾಲೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Accident | ಸರಕಾರಿ ಬಸ್‌- ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸ್ಥಳದಲ್ಲೇ ಸಾವು

Exit mobile version