Site icon Vistara News

Murder Case: ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣ; 14 ಆರೋಪಿಗಳ ಬಂಧನ

Siddapur Mahesh

ಬೆಂಗಳೂರು: ರೌಡಿಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ (Murder Case) 14 ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಸುನೀಲ್ ಅಲಿಯಾಸ್ ಸಿದ್ದಾಪುರ ಸುನೀಲ್, ಗ್ರೇಸ್ ವಾಲ್ಟರ್ , ಶ್ರೀನಿವಾಸ್, ಕಾರ್ತೀಕ್‌ ಸೇರಿ ಒಟ್ಟು 14 ಆರೋಪಿಗಳ ಬಂಧನವಾಗಿದೆ.

ಬಂಧಿತ ಆರೋಪಿಗಳನ್ನು ಪೊಲೀಸರು, ಕೋರಮಂಗಲ ಎನ್‌ಜಿವಿಯಲ್ಲಿ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ 14 ದಿನಗಳವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಜೈಲಿನಿಂದ ಹೊರಬರುತ್ತಿದ್ದಂತೆ ಆಗಸ್ಟ್ 4 ರಂದು ಮಹೇಶ್‌ನನ್ನು ಆರೋಪಿಗಳು ಹತ್ಯೆಗೈದಿದ್ದರು. ಪ್ರಕರಣದಲ್ಲಿ ಒಟ್ಟು 14 ಜನ ಆರೋಪಿಗಳನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಾದ ಎ1 ವಿಲ್ಸನ್ ಗಾರ್ಡನ್ ನಾಗ ಹಾಗೂ ಎ2 ಡಬ್ಬಲ್‌ ಮೀಟರ್ ಮೋಹನನಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ | Udupi Toilet case : ಉಡುಪಿ ವಿಡಿಯೊ ಪ್ರಕರಣ ಸಿಐಡಿಗೆ ಹಸ್ತಾಂತರ; ನಡೆಯಲಿದೆ ಉನ್ನತ ಮಟ್ಟದ ತನಿಖೆ

ಆ.4ರಂದು ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಹೊಸ ರೋಡ್ ಜಂಕ್ಷನ್ ಬಳಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿ ರೌಡಿಶೀಟರ್ ಮಹೇಶ್‌ ಕಾರಿನಲ್ಲಿ ಹೋಗುತ್ತಿದ್ದಾಗ, ದುಷ್ಕರ್ಮಿಗಳು ದಾಳಿ ಮಾಡಿ ಹತ್ಯೆ ಮಾಡಿತ್ತು. ಕೊಲೆಯಾಗಿದ್ದ ಮಹೇಶ್‌, ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ವಿರೋಧಿ ಗ್ಯಾಂಗ್‌ ಲೀಡರ್ ಆಗಿದ್ದ. ಕೆಲ ದಿನಗಳ ಹಿಂದೆ ಆರ್‌ಟಿ ನಗರದ ಬಳಿ ಕಪಿಲ್ ಹತ್ಯೆ ಮಾಡಲಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ವಿಲ್ಸನ್ ಗಾರ್ಡನ್ ನಾಗ ಗ್ಯಾಂಗ್‌ನಿಂದ ಸಿದ್ದಾಪುರ ಮಹೇಶ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಕೊಲೆ‌ ಪ್ರಕರಣವೊಂದರಲ್ಲಿ ಮಹೇಶ್ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶಾಂತಿನಗರದ ಲಿಂಗನ ಕೊಲೆಗೆ ಫೈನಾನ್ಸ್ ಮಾಡಿದ್ದ ಎಂಬ ಕಾರಣಕ್ಕೆ ಮದನ್‌ ಅಲಿಯಾಸ್ ಪಿಟೀಲ್‌ನನ್ನು ರೌಡಿಶೀಟರ್‌ ಸಿದ್ದಾಪುರ ಮಹೇಶ್‌ ಕೊಲೆ ಮಾಡಿದ್ದ. ಈ ಹಿಂದೆ ಸಿದ್ದಾಪುರ ಡಾನ್ ಪಟ್ಟಕ್ಕಾಗಿ ಲಿಂಗ ಹಾಗೂ ವಿಲ್ಸನ್ ಗಾರ್ಡನ್‌ ನಾಗನ ಗ್ಯಾಂಗ್ ಕಲಹ ನಡೆದಿತ್ತು. ಆಗ ನಾಗನನ್ನು ಮುಗಿಸಲು ಲಿಂಗ ಪ್ಲಾನ್ ಮಾಡಿದ್ದ. ಆದರೆ, ಹಾಸನದ ಫಾರ್ಮ್‌ ಹೌಸ್‌ನಲ್ಲಿ ಲಿಂಗನನ್ನೇ ಬರ್ಬರವಾಗಿ ನಾಗ ಹತ್ಯೆ ಮಾಡಿಸಿದ್ದ.

ಇದನ್ನೂ ಓದಿ | ‌Car Accident: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಬ್ಬನ ಕೈ ಕಟ್, ಮೂವರಿಗೆ ಗಾಯ

ನಂತರ ಲಿಂಗನ ಬಲಗೈ ಬಂಟ ಮಹೇಶ್, ನಾಗನಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಫೈನಾನ್ಸಿಯರ್ ಮದನ್‌ನನ್ನು ಕೊಲೆ ಮಾಡಿದ್ದ. ಹೀಗಾಗಿ ಹಳೇ ದ್ವೇಷ ತೀರಿಸಿಕೊಳ್ಳಲು ಮಹೇಶ್ ಕೊಲೆ ಮಾಡಲಾಗಿತ್ತು. ಇದೀಗ ಪ್ರಕರಣದಲ್ಲಿ ವಿಲ್ಸನ್‌ ಗಾರ್ಡನ್‌ ನಾಗ ಗ್ಯಾಂಗ್‌ನ 14 ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version