Site icon Vistara News

ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯುಸೆಕ್ ನೀರು ಬಿಡುಗಡೆ; ಕೃಷ್ಣಾ ನದಿಗೆ ಮತ್ತೆ ಜೀವಕಳೆ

Krishna River

#image_title

ಬೆಳಗಾವಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1500 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಪಕ್ಷಾತೀತವಾಗಿ ಮಹಾ ಸರ್ಕಾರಕ್ಕೆ ನೀರು ಬಿಡುವಂತೆ ಮನವಿ ರಾಜ್ಯದ ಜನಪ್ರತಿನಿಧಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ನೀರು ಬಿಡುಗಡೆಯಾಗಿದೆ. ಇದರಿಂದ ಬತ್ತುವ ಹಂತ ತಲುಪಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರು ಕುಡಿಯುವ ನೀರಿಲ್ಲದೆ ಹೈರಾಣಾಗಿದ್ದರು. ಹೀಗಾಗಿ ಕೃಷ್ಣಾನದಿಗೆ 5 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಮೇ 31ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಏಕನಾಥ್ ಶಿಂಧೆ ಸರ್ಕಾರವು, ರಾಜಾಪುರ ಬ್ಯಾರೇಜ್‌ನಿಂದ 1500 ಕ್ಯುಸೆಕ್‌ ನೀರು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದಿಂದ ಕೃಷ್ಣೆಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ನೀರಿಲ್ಲದೆ ಹೈರಾಣಾಗಿದ್ದ ಬೆಳಗಾವಿ ಭಾಗದ ನದಿ ತೀರದ ಜನರು ನಿರಾಳರಾಗಿದ್ದಾರೆ.

ಇದನ್ನೂ ಓದಿ | Loksabha 2024: ಹೇ ಕೂತ್ಕೊಳಪ್ಪ, ಮೋದಿ ಸೋತಾಗ ಗೊಬ್ಬರದ ರೇಟ್‌ ಕಡಿಮೆ ಮಾಡ್ತೀವಿ: ಅಭಿಮಾನಿಗೆ ರೇಗಿದ ಸಿಎಂ ಸಿದ್ದರಾಮಯ್ಯ

Viral news: ಮಳೆ ಬರದ ಊರಿನಲ್ಲಿ ಒಲ್ಲದ ವಧು- ವರನಿಗೆ ಕಂಕಣಯೋಗ!

ಬೆಳಗಾವಿ: ಮುಂಗಾರು ತಡವಾಗಿರುವುದರಿಂದ ಉತ್ತರ ಕರ್ನಾಟಕ ನೀರಿಗಾಗಿ ಪರಿತಪಿಸುತ್ತಿದೆ. ಹೀಗಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದವರು ಮಳೆ ಬರಲಿ ಎಂದು ಕತ್ತೆಗಳಿಗೆ ಮದುವೆ (donkey marriage) ಮಾಡಿಸಿದ್ದು, ವೈರಲ್‌ (Viral news) ಆಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರಗಾಲದ ಆತಂಕವೂ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಯಿತು.

ಇದನ್ನೂ ಓದಿ | Free Bus: ನಾಳೆ ಮಹಿಳೆಯರಲ್ಲಿ ‘ಶಕ್ತಿ’ ಸಂಚಾರ! ಉಚಿತ ಪ್ರಯಾಣಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್‌ಕಾರ್ಡ್‌ ಸಿಗೋದು ಯಾವಾಗ?

ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತೆ ಎಂಬ ನಂಬಿಕೆ ಈ ಭಾಗದ ರೈತಾಪಿ ಜನರಲ್ಲಿದೆ. ಈ ಹಿಂದೆ ಹೀಗೆ ಮಾಡಿದಾಗ ಮಳೆ ಬಂದ ನಿದರ್ಶನಗಳನ್ನು ಜನ ನೆನೆಯುತ್ತಾರೆ. ಈ ಹಿನ್ನೆಲೆಯಲ್ಲಿ, ಕತ್ತೆಗಳಿಗೆ ಮದುವೆ ಮಾಡಿಸಿ ದೇವರಲ್ಲಿ ಪ್ರಾರ್ಥನೆ ಜನ ಮಾಡಿದ್ದಾರೆ. ಕತ್ತೆಗಳಿಗೆ ಬಿಳಿ ಪಂಚೆ, ಸೀರೆ ತೊಡಿಸಿ ತಿಲಕವಿಟ್ಟು ತಾಳಿ ಕಟ್ಟಿಸಿ ವಾದ್ಯಮೇಳದೊಂದಿಗೆ ಮದುವೆ ಗ್ರಾಮಸ್ಥರು ಮಾಡಿದರು. ಕತ್ತೆಗಳು ನಾಚಿಕೊಂಡು ನಿಂತಿದ್ದವು!

Exit mobile version