Site icon Vistara News

Road Accident: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಕೊಪ್ಪಳದ ಇಬ್ಬರ ಸಾವು

A Man Died in Road Accident police conducted the inspection

#image_title

ಮಂಡ್ಯ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ (Mysore Bangalore expressway)ಯಲ್ಲಿ ಮತ್ತೊಂದು ಭೀಕರ ಅಪಘಾತವಾಗಿದೆ (Road Accident). ಅಪರಿಚಿತ ವಾಹನಕ್ಕೆ ಬೈಕ್​ ಡಿಕ್ಕಿಯಾಗಿ, ಇದರಲ್ಲಿದ್ದ ಸವಾರು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯ ಮದ್ದೂರು ಪಟ್ಟಣದ ಫ್ಲೈಓವರ್ ಮೇಲೆ ದುರ್ಘಟನೆ ನಡೆದಿದ್ದು (Accident In Mysore Bangalore expressway) , ಮೃತರನ್ನು ಮಣಿ (25) ಮತ್ತು ಜನಾರ್ದನ ಪೂಜಾರಿ (21) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೊಪ್ಪಳ ಜಿಲ್ಲೆಯವರಾಗಿದ್ದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮುಂಜಾನೆ ಬೆಂಗಳೂರಿನಿಂದ ಬೈಕ್​ನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು-ಬೆಂಗಳೂರು ಹೆದ್ದಾರಿ ಕಳೆದ ಮೂರು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದೆ. ಆದರೆ ಈಗಾಗಲೇ ಅಲ್ಲಿ ಹಲವು ಅಪಘಾತಗಳು ಉಂಟಾಗಿದ್ದು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇತ್ತೀಚೆಗೆ ಮದ್ದೂರಿನ ಹೊರವಲಯದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದರು. ಈ ಮೈಸೂರು-ಬೆಂಗಳೂರು ಹೆದ್ದಾರಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಪದೇಪದೆ ಅಪಘಾತ ಆಗುತ್ತಿರುವುದರಿಂದ ಆತಂಕವೂ ಉಂಟಾಗಿದೆ.

ಇದನ್ನೂ ಓದಿ: Road Accident: ಬೈಕ್‌ಗೆ ಲಾರಿ ಡಿಕ್ಕಿಯಾಗಿ ಶಾಲಾ ಬಾಲಕಿ ಸ್ಥಳದಲ್ಲೇ ಸಾವು

ರಾಯಚೂರಲ್ಲಿ ಬಾವಿಯಲ್ಲಿ ಶವ ಪತ್ತೆ

ರಾಯಚೂರು: ಇಲ್ಲಿನ ಮಾನ್ವಿ ಪಟ್ಟಣದಲ್ಲಿ ಸುಬ್ರಹ್ಮಣ್ಯ ಎಂಬುವರ ಶವ ಪ ಪಾಳು ಬಾವಿಯಲ್ಲಿ ಪತ್ತೆಯಾಗಿದೆ. ಈತ ಸುಬ್ಬು ಎಂದೇ ಹೆಸರಾಗಿದ್ದ. ಮಾನ್ವಿ ಪಟ್ಟಣದಲ್ಲಿ ನೇಕಾರನಾಗಿದ್ದ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಈತನನ್ನು ಕುಟುಂಬದವರು, ಪೊಲೀಸರು ಹುಡುಕಿದ್ದರು. ಇದೀಗ ಸುಬ್ರಹ್ಮಣ್ಯನ ಶವ ಪಾಳುಬಿದ್ದ ಬಾವಿಯಲ್ಲಿ ಸಿಕ್ಕಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಒಟ್ಟಾಗಿ ಮೃತದೇಹವನ್ನು ಮೇಲೆತ್ತಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಬ್ರಹ್ಮಣ್ಯನ ಮೃತದೇಹವನ್ನು ಬಾವಿಯಿಂದ ಎತ್ತುತ್ತಿರುವ ಅಗ್ನಿಶಾಮಕದಳದ ಸಿಬ್ಬಂದಿ
Exit mobile version