ಶಿರಸಿ: ಹಾವು ಕಚ್ಚಿ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಉ.ಕ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯ ದಾಸನಕೊಪ್ಪ ವೃತ್ತದ ಬಳಿ ಘಟನೆ ನಡೆದಿದೆ. ಮನೆ ಹಿಂಬದಿಯಲ್ಲಿ ಆಟ ಆಡುತ್ತಿದ್ದ ತರಾನ್ ಮಹಮ್ಮದ್ ಸಾಬ್ (2) ಮೃತಪಟ್ಟ ಬಾಲಕ.
ಆಟವಾಡುತ್ತಿದ್ದ ಎರಡು ವರ್ಷದ ಮಗು ತಾಯಿ ಬಳಿ ಬಂದು ಏನೋ ಕಚ್ಚಿದೆ ನೋವಾಗಿದೆ ಅಂತಾ ಅಳುತ್ತಾ ಹೇಳಿದೆ.ಆದರೆ ಪೋಷಕರು ಮಾತ್ರ ಇದೇನೋ ಇರುವೆ ಕಚ್ಚಿರಬಹುದು ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ ಆಮೇಲೆ ಅಲ್ಲಿ ನಡೆದಿದ್ದೇ ಬೇರೆ.
ಸ್ವಲ್ಪ ಹೊತ್ತಿನಲ್ಲಿ ಮಗು ಅಸ್ವಸ್ಥಗೊಂಡಿದೆ. ಬಾಯಿಯಿಂದ ನೊರೆ ಬರಲು ಆರಂಭಿಸಿ ಅಲ್ಲೇ ಪ್ರಾಣ ಬಿಟ್ಟಿದೆ.… ಕೂಡಲೇ ಆಸ್ಪತ್ರೆಗೆ ಸೇರಿಸಲು ಮುಂದಾದರು ಏನು ಪ್ರಯೋಜನವಾಗಿಲ್ಲ… ಅಷ್ಟರಲ್ಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು…. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮಗುವಿನ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು.
ಪೋಷಕರೇ ಎಚ್ಚರವಿರಲಿ
ಚಿಕ್ಕ ಮಕ್ಕಳು ಸಾಮಾನ್ಯವಾಗಿ ಹೊರಗೆ ಆಟ ಆಡುವುದು ಸಾಮಾನ್ಯ. ಆದರೆ ಮಕ್ಕಳ ಬಗ್ಗೆ ನಿಗಾ ವಹಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ.. ಅದರಲ್ಲೂ ತೊದಲು ಮಾತನಾಡುವ ಮಕ್ಕಳ ಬಗ್ಗೆ ನಿಗಾ ವಹಿಸುವಲ್ಲಿ ಎಚ್ಚರವಿರಲಿ.. ಮಕ್ಕಳ ಬಗ್ಗೆ ನಿರ್ಲಕ್ಷಿಸದಿರಿ…ಎನ್ನುವುದು ಈ ಹೊತ್ತಿನಲ್ಲಿ ಹೇಳಬಹುದಾದ ಕಿವಿಮಾತು.
ಇದನ್ನೂ ಓದಿ | Snake bite | ಮೇಕೆಗೆ ಮೇವು ತರಲು ಹೊಲಕ್ಕೆ ತೆರಳಿದ್ದ ಯುವಕ ನಾಗರಹಾವು ಕಡಿತದಿಂದ ಸಾವು