Site icon Vistara News

Ballary young Mayor : ಬಳ್ಳಾರಿ ಪಾಲಿಕೆಗೆ 21 ವರ್ಷದ ಯುವತಿ ಮೇಯರ್‌, ರಾಜ್ಯದಲ್ಲೇ ಅತಿಕಿರಿಯ ವಯಸ್ಸಿನ ಮಹಾಪೌರರು!

Ballary Mayor triveni

#image_title

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ಕೇವಲ 21 ವರ್ಷದ ಯುವತಿ ಮೇಯರ್‌ (Ballary young Mayor) ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ರಾಜ್ಯದ ಅತಿ ಕಿರಿಯೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನೂತನ ಮೇಯರ್‌ ಡಿ. ತ್ರಿವೇಣಿ ಅವರಿಗೆ ಇನ್ನೂ 23 ವರ್ಷ ಮಾತ್ರ. ಉಪಮೇಯರ್‌ ಆಗಿ ಬಿ. ಜಾನಕಿ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್‌ ಇಲ್ಲಿ ಬಹುಮತವನ್ನು ಹೊಂದಿದ್ದು, ಇಬ್ಬರೂ ಅದೇ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ಬಳ್ಳಾರಿ ಮಹಾನಗರಪಾಲಿಕೆಯಲ್ಲಿ ಒಟ್ಟು 39 ಸದಸ್ಯರಿದ್ದು, ಈ ಪೈಕಿ 21 ಮಂದಿ ಕಾಂಗ್ರೆಸ್‌ನವರು. ಬಿಜೆಪಿಗೆ ಇಲ್ಲಿ 13 ಸ್ಥಾನವಿದೆ. ಐದು ಮಂದಿ ಪಕ್ಷೇತರರಿದ್ದು ಅವರೂ ಕಾಂಗ್ರೆಸ್‌ನ್ನು ಬೆಂಬಲಿಸುತ್ತಿದ್ದಾರೆ. ಸಂಸದರು, ಶಾಸಕರು ಸೇರಿ ಇಲ್ಲಿ ಒಟ್ಟು 44 ಮತಗಳಿವೆ.

ಮೇಯರ್‌ ತ್ರಿವೇಣಿ ಮತ್ತು ಉಪಮೇಯರ್‌ ಜಾನಕಿ

ಮೇಯರ್‌ ಸ್ಥಾನಕ್ಕೆ ಡಿ. ತ್ರಿವೇಣಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು 28 ಮತ ಪಡೆದರೆ, ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದ ನಾಗರತ್ನ ಅವರಿಗೆ 16 ಮತಗಳು ಬಿದ್ದಿವೆ. ಉಪಮೇಯರ್‌ ಸ್ಥಾನಕ್ಕೆ ಬಿ. ಜಾನಕಿ ಅವರೊಬ್ಬರೇ ಕಣದಲ್ಲಿದ್ದು ಅವಿರೋಧವಾಗಿ ಆಯ್ಕೆಯಾದರು.

ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ

ಡಿ. ತ್ರಿವೇಣಿ ಅವರು 22ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ನಾಲ್ಕನೇ ವಾರ್ಡ್‌ನಿಂದ ಗೆದ್ದಿದ್ದರು. ಆಗ ಅವರಿಗೆ 501 ಮತಗಳು ಬಿದ್ದು ಒಳ್ಳೆಯ ಅಂತರಿಂದ ಗೆದ್ದಿದ್ದರು. 21 ವರ್ಷದ ತ್ರಿವೇಣಿ ಅವರು ಪ್ಯಾರಾ ಮೆಡಿಕಲ್‌ ವಿದ್ಯಾಭ್ಯಾಸ ಮಾಡಿದ ಬೆನ್ನಿಗೇ ರಾಜಕೀಯಕ್ಕೆ ಇಳಿದಿದ್ದರು.

ರಾಜಕೀಯ ಹಿನ್ನೆಲೆ ಇದೆಯಾ?

ತ್ರಿವೇಣಿ ಅವರಿಗೆ ರಾಜಕೀಯ ಹಿನ್ನೆಲೆಯೂ ಇದೆ. ಇವರ ತಾಯಿ ಸುಶೀಲಾ ಬಾಯಿ ಅವರು ಕಾಂಗ್ರೆಸ್‌ ನಾಯಕಿಯಾಗಿದ್ದು 2018-19ರಲ್ಲಿ ಮೇಯರ್ ಆಗಿದ್ದರು. ಇವರ ತಂದೆ ಸೂರಿ ಅವರು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು.

ತಾಯಿ ಸುಶೀಲಾ ಬಾಯಿ ಅವರ ಜತೆ ತ್ರಿವೇಣಿ

ಕಳೆದ ವರ್ಷ ಕಾಂಗ್ರೆಸ್‌ನಿಂದ ರಾಜೇಶ್ವರಿ ಸುಬ್ಬರಾಯುಡು ಮೇಯರ್ ಆಗಿ ಆಯ್ಕೆಯಾಗಿದ್ದರು. ಅವರ ಅವಧಿ ಮುಗಿದ ಹಿನ್ನೆಲೆ ಈಗ ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆದಿದೆ. ಈ ಬಾರಿ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು.

ಸಂತಸ ಹಂಚಿಕೊಂಡ ತ್ರಿವೇಣಿ

ಕಾಂಗ್ರೆಸ್‌ ನಾಯಕಿಯಾಗಿ ಹೊರಹೊಮ್ಮಿರುವ ಡಿ. ತ್ರಿವೇಣಿ ಅವರು ಮೇಯರ್‌ ಆಗಿ ಆಯ್ಕೆಯಾಗಿರುವುದರಿಂದ ಖುಷಿಯಾಗಿದೆ ಎಂದು ಹೇಳಿದರು. ತಾನು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದು, ಗುರು ಹಿರಿಯರ ಸಹಾಯದಿಂದ ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ : Belagavi Palike Election: ಬೆಳಗಾವಿ ಪಾಲಿಕೆ ಮೇಯರ್‌ ಬಿಜೆಪಿಯ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ್

Exit mobile version