Site icon Vistara News

Sudden death | ರೋಸ್‌ ಸಮಾರಂಭಕ್ಕೆ ಹೋಗಿದ್ದ ಯುವತಿ ಕುಳಿತಲ್ಲೇ ಕುಸಿದುಬಿದ್ದು ಸಾವು

jyothsna death

ಉಡುಪಿ: ಕ್ರಿಶ್ಚಿಯನ್ನರಲ್ಲಿ ಮದುವೆ ಮುನ್ನಾ ದಿನ ನಡೆಯುವ ರೋಸ್‌ ಸಮಾರಂಭಕ್ಕೆ ಬಂದಿದ್ದ ಯುವತಿಯೊಬ್ಬರು ಕುಳಿತಲ್ಲೇ ಕುಸಿದುಬಿದ್ದು (Sudden death) ಮೃತಪಟ್ಟಿದ್ದಾರೆ.

ಉಡುಪಿಯ ಕೊಳಲಗಿರಿಯ ಹಾವಂಜೆಯ ನಿವಾಸಿಯಾಗಿರುವ ಜ್ಯೋತ್ಸ್ನಾ ಲೂವಿಸ್‌ (೨೩) ಮೃತಪಟ್ಟವರು. ಜ್ಯೋತ್ಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮದುವೆ ಮನೆಗೆ ಬಂದಿದ್ದರು. ರಾತ್ರಿ ೮.೩೦ರ ಹೊತ್ತಿಗೆ ಇತರರೆಲ್ಲ ಪಾನೀಯಗಳನ್ನು ಸೇವಿಸುತ್ತಾ, ನೃತ್ಯ ಮಾಡುತ್ತಾ ಖುಷಿಪಡುತ್ತಿದ್ದರು. ಇದನ್ನೆಲ್ಲ ನೋಡುತ್ತಾ ಕುರ್ಚಿಯಲ್ಲಿ ಕುಳಿತಿದ್ದ ಜ್ಯೋತ್ಸ್ನಾ ಅಲ್ಲೇ ಕುಸಿದುಬಿದ್ದರು.

ಸಂಬಂಧಿಕರು ತಕ್ಷಣ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಫಲ ಸಿಗಲಿಲ್ಲ. ಅವರು ಗುರುವಾರ ಬೆಳಗ್ಗೆ ನಿಧನರಾದರು.

ಉಡುಪಿ ಭಾಗದಲ್ಲಿ ಇತ್ತೀಚೆಗೆ ಇಬ್ಬರು ಹೆಣ್ಮಕ್ಕಳು ಇದೇ ರೀತಿ ದಿಢೀರಾಗಿ ಇದ್ದಕ್ಕಿದ್ದಂತೆಯೇ ಪ್ರಾಣ ಕಳೆದುಕೊಂಡಿದ್ದಾರೆ. ಯುವಜನರಲ್ಲಿ ಹೆಚ್ಚುತ್ತಿರುವ ಒತ್ತಡ, ಹೃದಯ ದೌರ್ಬಲ್ಯದ ಕಾರಣಗಳಿಂದ ಸಾವು ಸಂಭವಿಸುತ್ತಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Children Heart Attack | ಕುಂದಾಪುರದ ಅನುಶ್ರೀ ಸಾವಿನ ಬೆನ್ನಲ್ಲೇ 14 ವರ್ಷದ ಬಾಲಕಿ ವೈಷ್ಣವಿ ಹೃದಯಾಘಾತದಿಂದ ಸಾವು

Exit mobile version