Site icon Vistara News

Sand Mafia: ಸುರತ್ಕಲ್‌ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 250 ಲೋಡ್ ಮರಳು ಜಪ್ತಿ

250 loads of sand illegally stored near Surathkal seized

#image_title

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 250 ಲೋಡ್ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮುಂಚೂರು ಗ್ರಾಮದಲ್ಲಿ 100 ಲೋಡ್, ಚೆಳ್ಯಾರು ಗ್ರಾಮದಲ್ಲಿ 150 ಲೋಡ್ ಮರಳನ್ನು ಜಪ್ತಿ (Sand Mafia) ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಳೆಗಾಲದಲ್ಲಿ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಕಾನೂನು ಉಲ್ಲಂಘಿಸಿ ಮರಳು ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ಮಾಡಿ, ಮರಳನ್ನು ವಶಕ್ಕೆ ಪಡೆದಿದ್ದಾರೆ. ಮರಳು ದಾಸ್ತಾನು ಮಾಡಲು ಜಾಗ ನೀಡಿದ್ದ ಭೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು‌, ಮರಳು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ | Murder Case: ಪತ್ನಿಯ ಶೀಲ ಶಂಕಿಸಿ ಚಾಕು ಇರಿದವ ಮಗನನ್ನೂ ಅಟ್ಟಾಡಿಸಿದ; ಸಾಫ್ಟ್‌ವೇರ್‌ ಗಂಡನ ವಿಚಿತ್ರ ಕಿರುಕುಳ

ಬಾವಿಯಲ್ಲಿ ಅಪರಿಚಿತ ಯುವಕ, ಯುವತಿಯ ಶವ ಪತ್ತೆ

ವಿಜಯಪುರ: ಜಿಲ್ಲೆಯ ತಿಕೋಟಾ ಪಟ್ಟಣದ ಸಿದ್ದಾಪುರ ಗ್ರಾಮದ ಬಾವಿಯಲ್ಲಿ ಅಪರಿಚಿತ ಯುವಕ, ಯುವತಿ ಶವಗಳು ಪತ್ತೆಯಾಗಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುವುದು ಪೊಲೀಸ್ ತನಿಖೆ ಬಳಿಕ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಂಗಭದ್ರ ನದಿಯಲ್ಲಿ ಮುಳುಗಿ ಬಾಲಕ ಸಾವು

ದಾವಣಗೆರೆ: ಹೊನ್ನಾಳಿ ಸಮೀಪದ ಕೋಟೆಮಲ್ಲೂರು ಬಳಿ ತುಂಗಭದ್ರ ನದಿಯಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ. ಅರಬ್ಬಟ್ಟಿಯ ಇಂದಿರಾ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ತಿಪ್ಪೇಶ್ (12) ಮೃತ ವಿದ್ಯಾರ್ಥಿ. ಭಾನುವಾರ ಮಧ್ಯಾಹ್ನ ಗೆಳೆಯರ ಜತೆ ತುಂಗಭದ್ರ ನದಿಗೆ ಈಜಲು ಹೋಗಿದ್ದಾಗ ಘಟನೆ ಸಂಭವಿಸಿದೆ. ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Exit mobile version