Site icon Vistara News

Karnataka Election: ರಾಮನಗರದಲ್ಲಿ ಜನಕ್ಕೆ ಹಂಚಲು ಇರಿಸಿದ್ದ 2,900 ಕುಕ್ಕರ್‌ ವಶಕ್ಕೆ, ಅವುಗಳ ಮೇಲಿನ ಫೋಟೊ ಯಾರದ್ದು?

2900 cookers that were kept for distribution to voters were seized

2900 cookers that were kept for distribution to voters were seized

ರಾಮನಗರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದ್ದು, ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳು, ಶಾಸಕರು ಜನರಿಗೆ ಹತ್ತಾರು ಆಮಿಷ, ಭರವಸೆ, ಉಡುಗೊರೆಗಳನ್ನು ನೀಡುವ ಮೂಲಕ, ಜಾತ್ರೆ, ಪಂದ್ಯಾವಳಿಗಳಿಗಳನ್ನು ಆಯೋಜಿಸುವ ಮೂಲಕ ಮನವೊಲಿಸಲು ಯತ್ನಿಸುತ್ತಿದ್ದಾರೆ. ಅದರಲ್ಲೂ, ಹೆಣ್ಣುಮಕ್ಕಳಿಗೆ ಕುಕ್ಕರ್‌ಗಳನ್ನು ನೀಡಿ, ಅವರ ಮತ ಸೆಳೆಯುವ ತಂತ್ರಗಾರಿಕೆ ಜಾಸ್ತಿಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ರಾಮನಗರದಲ್ಲಿ ಮತದಾರರಿಗೆ ವಿತರಿಸಲು ಇರಿಸಿದ್ದ 2,900 ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಮನಗರದ ಕರಿಕಲ್‌ ದೊಡ್ಡಿ ಗ್ರಾಮದ ಬಳಿ ಇರುವ ಹಿರಾ ಪನ್ನಾ ಅಪ್ಲೈಯನ್ಸಸ್‌ ಕುಕ್ಕರ್‌ ಕಾರ್ಖಾನೆ ಮೇಲೆ ತಹಸೀಲ್ದಾರ್‌ ತೇಜಸ್ವಿನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮತದಾರರಿಗೆ ವಿತರಿಸಲು ಇರಿಸಿದ್ದ 2,900 ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಳ್ಳಲಾದ ಕುಕ್ಕರ್‌ಗಳು.

ಇವು ವಿಶ್ವಾಸ್‌ ವೈದ್ಯ ಎಂಬುವರಿಗೆ ಸೇರಿದ ಕುಕ್ಕರ್‌ಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸವದತ್ತಿ-ಯಲ್ಲಮ್ಮ ಮತಕ್ಷೇತ್ರದ ಜನರಿಗೆ ಹಂಚಲು ಕುಕ್ಕರ್‌ಗಳನ್ನು ತಯಾರಿಸಲಾಗಿದ್ದು, ಅವುಗಳ ಮೇಲೆ ಅಭ್ಯರ್ಥಿಯ ಫೋಟೊಗಳು ಇವೆ. ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Karnataka Election: ಸೀರೆ, ಕುಕ್ಕರ್‌ ಆಯ್ತು ಈಗ ಛತ್ರಿ ಹಿಡಿದ ಮುಖಂಡರು; ರಾಜಾಜಿನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮತ ಗಾಳ

Exit mobile version