ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತೆಂಗಿನ ಮರವೊಂದು ಆಕಸ್ಮಿಕವಾಗಿ ಉರುಳಿಬಿದ್ದು ರೈತರೊಬ್ಬರು ಪ್ರಾಣ (Accidental death) ಕಳೆದುಕೊಂಡಿದ್ದಾರೆ. ಮರ ನೇರವಾಗಿ ರೈತರ ಎದೆಗೇ ಬಿದ್ದಿದೆ.
ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಮೊಬೈಲ್, ಸಿಗರೇಟ್, ಗಾಂಜಾ ಪತ್ತೆಯಾಗಿದೆ. ಪ್ರತಿ ಬಾರಿಯೂ ರೇಡ್ ವೇಳೆ ಇದು (Ramanagara Jail) ಪುನರಾವರ್ತನೆಯಾಗುತ್ತಿದೆ.
Banglore-Mysore expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಳೆ (Karnataka Rain) ಅವಾಂತರ ಸೃಷ್ಟಿಯಾಗಿದ್ದು, ಉದ್ಘಾಟನೆಯಾದ ಆರೇ ದಿನಕ್ಕೆ ಕೆರೆಯಂತಾಗಿದೆ. ರಾಮನಗರದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡಿದ್ದು, ವಾಹನ ಸವಾರರು ದಿಕ್ಕೆಟ್ಟು ನಿಲ್ಲುವಂತಾಗಿತ್ತು.
ಶುಕ್ರವಾರ ಸುರಿದ ಮಳೆಗೆ ರಸ್ತೆಯಲ್ಲಿ ಮಳೆನೀರು ನಿಂತಿದೆ. ವಾಹನ ಸವಾರರು ಪರದಾಟ ಅನುಭವಿಸಿದರು. ಕೆಲವು ದ್ವಿಚಕ್ರ ವಾಹನಗಳು ಮಳೆ ನೀರಿನಿಂದಾಗಿ ಕೆಟ್ಟು ನಿಂತವು. ಮಳೆನೀರು ಸರಾಗವಾಗಿ ಹರಿದುಹೋಗದೆ ರಸ್ತೆಯಲ್ಲಿ ನಿಂತುಹೋದುದರಿಂದ ಈ ಅವಾಂತರ ಸೃಷ್ಟಿಯಾಗಿದೆ.
Karnataka Election: ರಾಮನಗರದ ಕರಿಕಲ್ ದೊಡ್ಡಿ ಗ್ರಾಮದ ಬಳಿ ಇರುವ ಕುಕ್ಕರ್ ಕಾರ್ಖಾನೆ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ, ಸಾವಿರಾರು ಕುಕ್ಕರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
Weather Report: ಕೋಲಾರ, ಚಿಕ್ಕಬಳ್ಳಾಪುರದ ಒಂದೆರಡು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಲಿದೆ. ಬೀದರ್, ರಾಯಚೂರು, ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Road Accident: ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ನೆಲಮಂಗಲದಲ್ಲಿ ಟಾಟಾಏಸ್ಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದರೆ, ಮತ್ತೊಂದು ಕಡೆ ಕಾರು ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.