Site icon Vistara News

2nd PU Exam 2023: ಫೀಸ್‌ ಕಟ್ಟದಿದ್ದರೆ ಹಾಲ್‌ ಟಿಕೆಟ್‌ ಇಲ್ಲ: ಪರೀಕ್ಷೆ ಬರೆಯಲು ಬಿಡದ ಕೋಲಾರದ ಕಾಲೇಜು

kolar college

ಕೋಲಾರ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಆರಂಭವಾಗುತ್ತಿದ್ದು, ಕೋಲಾರದ ಖಾಸಗಿ ಶಾಲೆಯೊಂದು ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಕೊನೆಯ ಕ್ಷಣದವರೆಗೂ ಹಾಲ್‌ ಟಿಕೆಟ್‌ ನೀಡದೆ ಸತಾಯಿಸಿದೆ.

ಬೆಳಗ್ಗೆ 10.15ರಿಂದ ಪರೀಕ್ಷೆ ನಡೆಯಲಿದೆ. ಆದರೆ, ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಕೋಲಾರ ನಗರದ ಮಹಿಳಾ‌ ಸಮಾಜ‌ ಶಾಲೆ ಶಿಕ್ಷಣ ಸಂಸ್ಥೆ ಪರೀಕ್ಷೆ ಹಾಲ್‌ಗೆ ಪ್ರವೇಶ ನೀಡಿಲ್ಲ. ಪೋಷಕರು ಪರೀಕ್ಷೆ ಶುಲ್ಕ ಸಂದಾಯ ಮಾಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಇವರ ಪ್ರವೇಶ ಪತ್ರವನ್ನು ಆಡಳಿತ ಮಂಡಳಿ ತಡೆಹಿಡಿದಿದೆ.

ಪೋಷಕರು ಹಾಗೂ ಆಡಳಿತ ಮಂಡಳಿಯ ಹಗ್ಗಜಗ್ಗಾಟದ ನಡುವೆ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳು ಆತಂಕದಿಂದ ಕಾಲೇಜು ಗೇಟ್‌ ಮುಂದೆ ನಿಂತಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: 2nd PU Exam 2023 : ಇಂದಿನಿಂದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ, ಹಿಜಾಬ್‌ಗೆ ಅವಕಾಶ ಇಲ್ಲವೇ ಇಲ್ಲ

Exit mobile version