Site icon Vistara News

2nd PUC Result 2023: ಕೂಲಿ ಮಾಡುವವರ ಮಗ ರಾಹುಲ್‌ ಈಗ ಪಿಯುಸಿ ಟಾಪರ್‌! ಸಾಧನೆಗೆ ಅಡ್ಡಿಯಾಗದ ಬಡತನ

ವಿಜಯಪುರದ ಎಸ್‌ಕೆ ಪಿಯು ಕಾಲೇಜಿನ ವಿದ್ಯಾರ್ಥಿ ರಾಹುಲ್ ಮೋತಿಲಾಲ್ ರಾಥೋಡ್ ತೋರಿಸಿಕೊಟ್ಟಿದ್ದಾರೆ. ದ್ವಿತೀಯ ಪಿಯುಸಿ (2nd puc Toppers) ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 592 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯಪುರದ ಎಸ್‌ಕೆ ಪಿಯು ಕಾಲೇಜಿನ ವಿದ್ಯಾರ್ಥಿ ರಾಹುಲ್ ಮೋತಿಲಾಲ್ ರಾಥೋಡ್ ತೋರಿಸಿಕೊಟ್ಟಿದ್ದಾರೆ. ದ್ವಿತೀಯ ಪಿಯುಸಿ (2nd puc Toppers) ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 592 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯಪುರ: ಪ್ರತಿಯೊಬ್ಬ ಪೋಷಕರಿಗೂ ತಾವು ಸಾಧಿಸಲು ಆಗದೇ ಇರುವುದನ್ನು ತಮ್ಮ ಮಕ್ಕಳು ಸಾಧಿಸಬೇಕು ಎಂಬ ಹೆಬ್ಬಯಕೆ ಇರುವುದು ಸಹಜ. ಸಾಧಿಸುವ ಛಲವೊಂದಿದ್ದರೆ ಬಡತನ ಎಂದೂ ಅಕ್ಷರ ಜ್ಞಾನಕ್ಕೆ ಅಡ್ಡಿಯಾಗುವುದಿಲ್ಲ ಎಂಬುದನ್ನು (2nd PUC Result 2023) ವಿಜಯಪುರದ ಎಸ್‌ಕೆ ಪಿಯು ಕಾಲೇಜಿನ ವಿದ್ಯಾರ್ಥಿ ರಾಹುಲ್ ಮೋತಿಲಾಲ್ ರಾಥೋಡ್ ತೋರಿಸಿಕೊಟ್ಟಿದ್ದಾರೆ. ದ್ವಿತೀಯ ಪಿಯುಸಿ (2nd puc Toppers) ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 592 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ರಾಹುಲ್ ರಾಥೋಡ್‌ ತಂದೆ ಮೋತಿಲಾಲ್, ತಾಯಿ ಸವಿತಾ ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನನಾಯಕ್ ತಾಂಡಾದ ನಿವಾಸಿಗಳಾಗಿದ್ದಾರೆ. ಇವರಿಗೆ ರಾಹುಲ್‌ ಸೇರಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬಡತನದ ಕಾರಣಕ್ಕೆ ಸದ್ಯ ಇಡೀ ಕುಟುಂಬ ಮಹಾರಾಷ್ಟ್ರಕ್ಕೆ ಕೂಲಿಗೆಂದು ವಲಸೆ ಹೋಗಿದೆ. ಮಹಾರಾಷ್ಟ್ರದಲ್ಲಿ ತಗಡಿನ ಶೆಡ್‌ವೊಂದರಲ್ಲಿ ವಾಸ ಇದ್ದು, ಮಗನ ಸಾಧನೆಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿರುವ ಎಸ್‌ಕೆ ಪಿಯು ಕಾಲೇಜಿಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಹುಲ್‌ ಹಾಸ್ಟೆಲ್‌ನಲ್ಲಿದ್ದುಕೊಂಡೆ ಸಾಧನೆ ಮಾಡಿದ್ದಾನೆ. ತನ್ನ ಸಾಧನೆಗೆ ತಂದೆ-ತಾಯಿ, ಕಾಲೇಜಿನ ಉಪನ್ಯಾಸಕರು, ಶಿಕ್ಷಣ ವಿಭಾಗದ ಉಪನ್ಯಾಸಕಿ ಬಸಮ್ಮ ಪ್ರೇರಣೆ ಆಗಿದ್ದಾರೆ. ಮುಂದೆ ಕಲಾವಿಭಾಗದಲ್ಲಿ ಬಿಎ ಮಾಡಿ ಎಲ್ಎಲ್‌ಬಿ ಕಲಿಯುವ ಆಸೆಯನ್ನು ರಾಹುಲ್ ರಾಥೋಡ್ ಹೊಂದಿದ್ದಾರೆ.

ಇದನ್ನೂ ಓದಿ: 2nd PUC Result 2023: ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ವಿದ್ಯಾರ್ಥಿಗಳದ್ದೇ ಪಾರಮ್ಯ; ಕೋಲಾರದ ಕೌಶಿಕ್‌, ಬೆಂಗಳೂರಿನ ಸುರಭಿ ರಾಜ್ಯಕ್ಕೇ ಟಾಪರ್‌

Exit mobile version