ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result 2023) ಪ್ರಕಟಗೊಂಡಿದ್ದು, ಶೇ. 74.67ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ರಾಜ್ಯ 5,716 ಕಾಲೇಜುಗಳಿಂದ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಲಾ ವಿಭಾಗದ ಟಾಪರ್‌ಗಳ ಪಟ್ಟಿ ಹೀಗಿದೆ.
ಕಲಾ ವಿಭಾಗದ ಟಾಪರ್ಸ್ ಪಟ್ಟಿ
ವಿದ್ಯಾರ್ಥಿ ಹೆಸರು – ಕಾಲೇಜಿನ ಹೆಸರು- ಅಂಕ
1.ತಮಸುಮ್ ಶೇಖ್- ಎನ್‌ಎಂಕೆಆರ್‌ವಿ ಪಿಯು ಮಹಿಳಾ ಕಾಲೇಜು, ಬೆಂಗಳೂರು- 593
2. ಕುಶಾನಾಯಕ್- ಇಂದು ಇನ್ನೋವೇಟಿವ್ ಪಿಯು ಕಾಲೇಜು, ಕೊಟ್ಟೂರು ವಿಜಯನಗರ-592
3. ದಡ್ಡಿ ಕರಿಬಸಮ್ಮ – ಇಂದು ಪಿಯು ಕಾಲೇಜು ಕೊಟ್ಟೂರು ವಿಜಯನಗರ– 592
4.ಮುತ್ತೂರು ಮಲ್ಲಮ್ಮ- ಸುಜಮ್ ಪಿಯು ಕಾಲೇಜು- ಬಳ್ಳಾರಿ- 592
5.ಪ್ರಿಯಾಂಕಾ ಕುಲಕರ್ಣಿ-ಲಿಂಗರಾಜು ಪಿಯು ಕಾಲೇಜು- ಬೆಳಗಾವಿ- 592
6.ರಾಹುಲ್ ಮೋತಿಲಾಲ್ ರಾಥೋಡ್- ಎಸ್‌ಕೆ ಪಿಯು ಕಾಲೇಜು- ವಿಜಯಪುರ- 592
7.ಸಹನಾ ಉಲ್ಲವಪ್ಪ ಕಡಕೋಲ್ – ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜು , ಬೆಳಗಾವಿ- 591
8.ಕೆ ಕೃಷ್ಣ- ಇಂದು ಪಿಯು ಕಾಲೇಜು ಕೊಟ್ಟೂರು ವಿಜಯನಗರ- 591
9.ಭಾಗಪ್ಪ- ಜ್ಞಾನಭಾರತಿ ಪಿಯು ಕಾಲೇಜು, ವಿಜಯಪುರ- 591
10. ಮಂಜುಶ್ರೀ- ವಿವೇಕಾನಂದ ಪಿಯು ಕಾಲೇಜು, ದಕ್ಷಿಣ ಕನ್ನಡ- 591
ಕೊಟ್ಟೂರಿನ ಇಂದು ಪಿಯು ಕಾಲೇಜಿಗೆ ಟಾಪ್ 10ನಲ್ಲಿ ಎರಡು ಸ್ಥಾನ
ರಾಜ್ಯದ ಟಾಪರ್ ಲಿಸ್ಟ್ ನಲ್ಲಿ ವಿಜಯನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ಇದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜಿನ ಇಬ್ಬರು, ಇಂದು ಇನ್ನೊವೇಟಿವ್ ಕಾಲೇಜಿನ ಒಬ್ಬರು, ಹರಪನಹಳ್ಳಿಯ SUJM ಪಿಯು ಕಾಲೇಜ್ ನ ಒಬ್ಬ ವಿದ್ಯಾರ್ಥಿ ಟಾಪರ್ ಪಟ್ಟಿಯಲ್ಲಿದ್ದಾರೆ.
ಕೊಟ್ಟೂರು ಇಂದು ಪಿಯು ಕಾಲೇಜ್ ನ ಕುಶಾನಾಯ್ಕ್ , ದಡ್ಡಿ ಕರಿಬಸಮ್ಮ, ಕಲಾ ವಿಭಾಗದಲ್ಲಿ 592 ಅಂಕ ಪಡೆದಿದ್ದಾರೆ. ಹರಪನಹಳ್ಳಿ SUJM ಕಾಲೇಜ್ ನ ಮುತ್ತೂರು ಮಲ್ಲಮ್ಮ ಸಹ ಕಲಾ ವಿಭಾಗದಲ್ಲಿ 592 ಅಂಕಗಳು ಪಡೆದಿದ್ದಾಳೆ.
ಇದನ್ನೂ ಓದಿ: 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ. 74.67 ವಿದ್ಯಾರ್ಥಿಗಳು ಪಾಸ್; ವೆಬ್‌ಸೈಟ್‌ನಲ್ಲಿ ರಿಸಲ್ಟ್