ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Result 2023) ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ವಿವಿಧ ಕಾಲೇಜಿನ 10 ವಿದ್ಯಾರ್ಥಿಗಳು ಟಾಪರ್‌ಗಳಾಗಿದ್ದಾರೆ. ರಾಜ್ಯದ ಟಾಪರ್ (puc toppers 2023) ಪಟ್ಟಿಯಲ್ಲಿ ಕೋಲಾರದ ಗಂಗೋತ್ರಿ ಕಾಲೇಜಿನ ಕೌಶಿಕ್ ಹಾಗೂ ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಸುರಭಿ 600ಕ್ಕೆ 596 ಅಂಕ ಗಳಿಸಿ ಮೊದಲ ಟಾಪರ್ ಆಗಿದ್ದಾರೆ.
ಬೆಂಗಳೂರಿನ ಆರ್ ವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಟ್ಟೋಜು ಜಯಶಿಕಾ ಹಾಗೂ ಉಡುಪಿಯ ಸಾತ್ವಿಕ್ ಪದ್ಮನಾಭ ಭಟ್ ಹಾಗೂ ಜೆಸ್ವಿತಾ ದಿಯಾಸ್ ಈ ಮೂವರು ವಿದ್ಯಾರ್ಥಿಗಳು 600ಕ್ಕೆ 595 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ 15 ವಿದ್ಯಾರ್ಥಿಗಳು 600ಕ್ಕೆ 594 ಅಂಕಗಳನ್ನು ಗಳಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದ ಟಾಪರ್ಸ್‌ಗಳ ಪಟ್ಟಿ ಹೀಗಿದೆ
ವಿದ್ಯಾರ್ಥಿ ಹೆಸರು – ಕಾಲೇಜಿನ ಹೆಸರು- ಅಂಕ
ಕೌಶಿಕ್- ಗಂಗೋತ್ರಿ ಪಿಯು ಕಾಲೇಜು, ಕೋಲಾರ- 596
ಸುರಭಿ ಎಸ್- ಆರ್‌ವಿ ಪಿಯು ಕಾಲೇಜು ಎನ್ಎಂಕೆಆರ್‌ವಿ ಕ್ಯಾಂಪಸ್, ಬೆಂಗಳೂರು- 596
ಕಟ್ಟೋಜು ಜಯಶಿಕಾ- ಆರ್‌ವಿ ಪಿಯು ಕಾಲೇಜು ಎನ್ಎಂಕೆಆರ್‌ವಿ ಕ್ಯಾಂಪಸ್, ಬೆಂಗಳೂರು- 595
ಸಾತ್ವಿಕ್ ಪದ್ಮನಾಭ ಭಟ್- ಮಹಾತ್ಮಾ ಗಾಂಧಿ ಮೆಮೋರಿಯಲ್ ಪಿಯು ಕಾಲೇಜು, ಉಡುಪಿ- 595
ಜೆಸ್ವಿತಾ ದಿಯಾಸ್- ಪೂರ್ಣಪ್ರಜ್ಞ ಪಿಯು ಕಾಲೇಜು, ಉಡುಪಿ- 595
ಹರ್ಷಿತ್ ಆರ್- ನಾರಾಯಣ ಪಿಯು ಕಾಲೇಜು, ಬೆಂಗಳೂರು- 594
ನೇಹಾ ಜೆ ರಾವ್- ಶ್ರೀ ವೆಂಕಟರಮಣ ಪಿಯು ಕಾಲೇಜು, ಉಡುಪಿ- 594
ಅದಿತಿ ಆರ್- ಎನ್‌ಎಂಕೆಆರ್‌ವಿ ಪಿಯು ಕಾಲೇಜು, ಬೆಂಗಳೂರು-594
ರುಚಿತಾ ಎಂ- ಸರ್ವೋದಯ ಪಿಯು ಕಾಲೇಜು, ತುಮಕೂರು- 594
ಸ್ಮಯ ಸದಾನಂದ ಮುಬೇನ್- ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ-594
ಯೋಗೇಶ್ ತುಕಾರಾಂ ಬಡಾಚಿ- ಸತ್ಯಸಾಯಿ ಲೋಕಸೇವಾ ಪಿಯು, ದಕ್ಷಿಣ ಕನ್ನಡ-594
ರಜತ ಎಂ ಹೆಗ್ಡೆ- ಎಂಇಎಸ್ ಚೈತನ್ಯ ಪಿಯು ಕಾಲೇಜು, ಉತ್ತರ ಕನ್ನಡ- 594
ಸಿರಿ ಆರ್ ಆಚಾರ್ಯ- ಆರ್‌ವಿ ಪಿಯು ಕಾಲೇಜು ಎನ್ಎಂಕೆಆರ್‌ವಿ, ಬೆಂಗಳೂರು- 594
ಪ್ರಚಿತಾ ಎಂ- ಆಳ್ವಾಸ್ ಪಿಯು ಕಾಲೇಜು, ದಕ್ಷಿಣ ಕನ್ನಡ- 594
ಹೇಮಲ್ ಎನ್- ವಿದ್ಯಾಮಂದಿರ ಐಎನ್ ಡಿಪಿ ಪಿಯು ಕಾಲೇಜು, ಬೆಂಗಳೂರು- 594
ಸಾಯಿಶ್ ಗೋಣಿ- ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜು, ಹುಬ್ಬಳ್ಳಿ- 594
ಧಾತ್ರಿ ಪಿ ಶ್ರೀರಾಮ್- ಕುಮಾರನ್ ಪಿಯು ಕಾಲೇಜು, ಬೆಂಗಳೂರು- 594
ಆರ್ ವಿ ಅಭಿಷೇಕ್- ಕುಮಾರನ್ ಪಿಯು ಕಾಲೇಜು,ಬೆಂಗಳೂರು- 594
ಹಂಸಿನಿ ಜಿ- ಕುಮಾರನ್ ಪಿಯು ಕಾಲೇಜು, ಬೆಂಗಳೂರು- 594
ಗಗನ್- ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು-594
ಇದನ್ನೂ ಓದಿ: What Next After PUC : ಪಿಯುಸಿ ನಂತರ ಮುಂದಿರುವ ಆಯ್ಕೆಗಳೇನು?; ಇಲ್ಲಿದೆ ಮಾಹಿತಿ