ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹಲವು ಗ್ರಾಮಗಳಲ್ಲಿ ಗುರುವಾರ ಬೆಳಗಿನ ಜಾವದಲ್ಲಿ ಲಘು ಭೂ ಕಂಪನ ಸಂಭವಿಸಿದೆ.
ನಿದ್ರೆಯಲ್ಲಿದ್ದವರಿಗೆ ಲಘು ಕಂಪನ ಶಾಕ್ ನೀಡಿತು. ದೊಡ್ಡ ರೀತಿಯ ಶಬ್ದ ಬಂದು ಬಳಿಕ ಬೆಳಗಿನ ಜಾವ 4.38ರಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಯಿತು. ರಿಕ್ಟರ್ ಮಾಪನದಲ್ಲಿ ಈ ಲಘು ಭೂಕಂಪನದ ತೀವ್ರತೆ ೩.೪ ಇತ್ತು. ಭೂಮಿಯ ೫ ಕಿ.ಮೀ ಅಡಿಯಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು.
ತಾಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ,ಕಾರಳ್ಳಿ ಗ್ರಾಮಗಳಲ್ಲಿ ಭೂಮಿ ಕಂಪಿಸಿತು. ಹೊಳೆನರಸೀಪುರ ತಾಲೂಕಿನಲ್ಲೂ ಭೂಮಿ ಕಂಪಿಸಿದೆ. ಪಟ್ಟಣದ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂ ಕಂಪನದ ಅನುಭವ ಉಂಟಾಯಿತು. ಭೂ ಕಂಪನದ ಅನುಭವ ಆಗುತ್ತಲೆ ಜನ ಮನೆಯಿಂದ ಹೊರಗೆ ಓಡಿ ಬಂದರು.
ಬುಧವಾರ ಅಫ್ಘಾನಿಸ್ತಾನದಲ್ಲಿ ಭೀಕರ ಭೂ ಕಂಪನದ ಬಳಿಕ ಇದು ನಡೆದಿರುವುದರಿಂದ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ; 900ಕ್ಕೂ ಹೆಚ್ಚು ಮಂದಿ ದಾರುಣ ಸಾವು, 600 ಜನರಿಗೆ ಗಾಯ