ಬೆಂಗಳೂರು: ಕಳೆದ 24 ಗಂಟೆಗಳಲ್ಲಿ 328 ಕೊರೊನಾ ಪ್ರಕರಣಗಳು (Coronavirus News) ಪತ್ತೆಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1159ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿನಿಂದ ಗುಣಮುಖರಾಗಿ 409 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಾದ್ಯಂತ ಶುಕ್ರವಾರ ಒಟ್ಟು 7205 ಮಂದಿಗೆ COVID 19 ತಪಾಸಣೆ (RTPCR – 6418, RAT – 787) ನಡೆಸಲಾಗಿದ್ದು, ಈ ಪೈಕಿ 328 ಮಂದಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವಿಟಿ ದರ ಶೇ. 4.55 ಇದ್ದು, ಮರಣ ಪ್ರಮಾಣದರ ಶೂನ್ಯವಿದೆ. 1159 ಸಕ್ರಿಯ ಪ್ರಕರಣಗಳ ಪೈಕಿ 1087 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು, 72 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಅಂದರೆ 628 ಸಕ್ರಿಯ ಕೊರೊನಾ ಪ್ರಕರಣಗಳಿವೆ.
ಜ. 6ರಂದು ಕೋವಿಡ್ ಹೆಲ್ಪ್‌ಲೈನ್ ಆರಂಭ: ದಿನೇಶ್ ಗುಂಡೂರಾವ್
ಬೆಂಗಳೂರು: ಕರ್ನಾಟಕದಲ್ಲಿ 1240 ಕೊರೊನಾ ಸಕ್ರಿಯ ಪ್ರಕರಣಗಳು (Coronavirus News) ಇವೆ. ಪಾಸಿಟಿವಿಟಿ ದರ ಹೆಚ್ಚಾಗಿದ್ದರೂ ಟೆಸ್ಟಿಂಗ್ ಪ್ರಮಾಣವೂ ಅಷ್ಟೇ ಹೆಚ್ಚಳವಾಗಿದೆ. ರೋಗ ಲಕ್ಷಣ ಇರುವವರ ಮೇಲೆ ನಿಗಾ ಇಟ್ಟು, ಟೆಸ್ಟಿಂಗ್ ಮಾಡಲಾಗುತ್ತಿದೆ. ಕೊರೊನಾ ಸೋಂಕಿತರ ಸಮಸ್ಯೆ ಆಲಿಸಲು ಜ. 6ರಂದು ಕೋವಿಡ್ 19 ಹೆಲ್ಪ್‌ಲೈನ್‌ಗೆ (Covid 19 Helpline) ಚಾಲನೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ. 3.28 ಇದೆ. ಕೇರಳದಲ್ಲಿ ಇಳಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ ಇಳಿಕೆಯ ಟ್ರೆಂಡ್ ಇನ್ನೂ ಶುರುವಾಗಿಲ್ಲ. ಮುಂದಿನ ದಿನದಲ್ಲಿ ಕಡಿಮೆಯಾಗಬಹುದು. ನಿನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ ಮಾರ್ಗದರ್ಶನ ನೀಡಿದ್ದಾರೆ. ಈಗ 20ರಲ್ಲಿ ಒಂದು ಕೇಸ್‌ಗೆ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಾ ಶೀತ ಜ್ವರ ಮಾದರಿ ಸಮಸ್ಯೆ (ಐಎಲ್‌ಐ) ಇರುವವರು ಸೇರಿ ವಯಸ್ಸಾಗಿರುವವರು ಟೆಸ್ಟ್ ಮಾಡಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ | Ram Janmabhoomi: ಹುಬ್ಬಳ್ಳಿ ಗಲಭೆ ಕೇಸ್; ಶ್ರೀಕಾಂತ ಪೂಜಾರಿಗೆ ಜಾಮೀನು ಮಂಜೂರು
ಮನೆಯಲ್ಲಿ ಐಸೋಲೇಷನ್ ಆಗಿರುವ ವೃದ್ಧರ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮಾತ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದ್ದೇವೆ. ಡೆತ್ ಆಡಿಟ್ ಕಮಿಟಿ ರಚನೆಯಾಗಿದೆ. ಡಾ. ಶಶಿಭೂಷಣ್ ಅವರನ್ನು ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇದುವರೆಗೆ ಒಟ್ಟು 20 ಸಾವು ಆಗಿದೆ. ಅದರಲ್ಲಿ 10 ಸಾವಿನ ಆಡಿಟ್ ರಿಪೋರ್ಟ್ ಬಂದಿದೆ. ಒಬ್ಬರ ಸಾವಿಗೆ ಮಾತ್ರ ಕೊರೊನಾ ಕಾರಣವಾಗಿತ್ತು. ಉಳಿದ ಮೃತರಿಗೆ ಅನ್ಯ ಕಾಯಿಲೆ ಇತ್ತು. ಹೀಗಾಗಿ ಎಲ್ಲಾ ಮೃತ ಸೋಂಕಿತರ ಡೆತ್ ಆಡಿಟ್‌ಗೆ ಸೂಚನೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.