Site icon Vistara News

ಗುಡಿಸಾಗರದಲ್ಲಿ ಬಿಸಿಯೂಟ ಸೇವಿಸಿ 35 ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು

35 children fall ill after consuming mid day meal in Gudisagar Hospitalised out of danger

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರದಲ್ಲಿ ಬಿಸಿಯೂಟ (mid day meal) ಸೇವಿಸಿ 35 ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ಗುಡಿಸಾಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಿಸಿಯೂಟ ಸೇವಿಸಿದ ಮಕ್ಕಳಲ್ಲಿ ವಾಂತಿ ಕಂಡುಬಂದಿದೆ. ತಕ್ಷಣವೇ ಅಡುಗೆಯನ್ನು ಪರಿಶೀಲನೆ ನಡೆಸಿದಾಗ ಬಿಸಿಯೂಟದ ಅನ್ನದಲ್ಲಿ ಹಲ್ಲಿಯಂತಹ ಪ್ರಾಣಿಯೊಂದು ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: SC ST Reservation: ಮಾರ್ಚ್‌ 30ರಂದು ಶಿವಮೊಗ್ಗದಲ್ಲಿ ಬಂಜಾರ ಸಮುದಾಯದ ಬೃಹತ್‌ ಪ್ರತಿಭಟನೆ; ಶಿಕಾರಿಪುರ ಚಲೋಗೆ ನಿರ್ಧಾರ

ಧಾರವಾಡ ಡಿಎಚ್ಒ ಡಾ. ಶಶಿ ಪಾಟೀಲ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ. ಇನ್ನು ಯಾವುದೇ ಮಕ್ಕಳಿಗೆ ಅಪಾಯವಿಲ್ಲ ಎಂದು ತಪಾಸಣೆ ನಡೆಸಿದ ವೈದ್ಯರು ತಿಳಿಸಿದ್ದಾರೆ.

Exit mobile version