Site icon Vistara News

Soldiers Fall ill: ಕ್ಯಾಂಪ್‌ನಲ್ಲಿ ಊಟ ಸೇವಿಸಿ 35 ಮಂದಿ ಸೈನಿಕರು ಅಸ್ವಸ್ಥ

soldiers fall ill

#image_title

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯ ಕ್ಯಾಂಪ್‌ನಲ್ಲಿ ಬುಧವಾರ ಮಧ್ಯಾಹ್ನದ ಊಟ ಸೇವಿಸಿದ ಬಳಿಕ 35 ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡುಗರಹಳ್ಳಿ ಬಳಿಯ ಕ್ಯಾಂಪ್‌ಗೆ ಸೈನಿಕರು ಚಾಲನಾ ತರಬೇತಿಗೆ ಬಂದಿದ್ದರು. ಮಧ್ಯಾಹ್ನ ಕ್ಯಾಂಪ್‌ನಲ್ಲೇ ತಯಾರಾದ ಆಹಾರ ಸೇವಿಸಿದ ಬಳಿಕ 35 ಸೈನಿಕರು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ | Crime News : ಹಾಸ್ಟೆಲ್‌ನಲ್ಲೇ ಯುವತಿಯ ಅತ್ಯಾಚಾರ, ಕೊಲೆ; ಹಳಿ ಮೇಲೆ ಪತ್ತೆಯಾಯ್ತು ಮತ್ತೊಂದು ಶವ!

ವಿಷಾಹಾರ ಸೇವನೆಯಿಂದ (Food poisoning) ಸೈನಿಕರು ಅಸ್ವಸ್ಥರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ.

Exit mobile version