Site icon Vistara News

Operation Kaveri: ಸುಡಾನ್‌ನಿಂದ ಬೆಂಗಳೂರಿಗೆ ಬಂದಿಳಿದ 362 ಕನ್ನಡಿಗರು, ಅವರು ಹೇಳಿದ್ದೇನು?

Sudan

ಬೆಂಗಳೂರು, ಕರ್ನಾಟಕ: ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರವು ಆಪರೇಷನ್ ಕಾವೇರಿ (Operation Kaveri) ಆರಂಭಿಸಿದೆ. ಈಗಾಗಲೇ ನೂರಾರು ಭಾರತೀಯರನ್ನು ಸುಡಾನ್‌ನಿಂದ ವಾಪಸ್ ಕರೆತರಲಾಗಿದೆ. ಈಗ, ಸುಡಾನ್‌ನಿಂದ ಸುಮಾರು 362 ಕನ್ನಡಿಗರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಸುಡಾನ್‌ನಿಂದ ವಿಶೇಷ ಸೇನಾ ವಿಮಾನದಲ್ಲಿ ಮೂಲಕ ಅವರನ್ನು ಕರೆತರಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನ್ನಡಿಗರು ಆಗಮಿಸಿದ್ದಾರೆ. ಮೊದಲ ವಿಮಾನದಲ್ಲಿ 362 ಜನ ಕನ್ನಡಿಗರು ಬಂದಿಳಿದಿದ್ದಾರೆ. ಏರ್‌ಪೋರ್ಟ್‌ನನಲ್ಲಿ ಅವರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಕೋವಿಡ್ ಟೆಸ್ಟ್ ಮಾಡಿ ವಿಳಾಸ ಎಲ್ಲ ಬರೆದುಕೊಂಡು ಕಳಿಸಲಿರುವ ಸಿಬ್ಬಂದಿ. ಬಳಿಕ ಅನಿವಾಸಿ ಕನ್ನಡಿಗರು ತಮ್ಮ ತಮ್ಮ ಸಂಬಂಧಿಗಳನ್ನು ಭೇಟಿಯಾಗಿ, ಖುಷಿಪಟ್ಟರು.

ಸುಡಾನ್‌ನಿಂದ ಬಂದ ಕನ್ನಡಿಗರೊಬ್ಬರ ಅನಿಸಿಕೆಗಳು

ಕನ್ನಡಿಗರನ್ನು ಸ್ವಾಗತಿಸಿದ ಹೆಲ್ತ್ ಕಮಿಷನರ್

ಸುಡಾನ್‌ನಿಂದ ಆಪರೇಷನ್ ಕಾವೇರಿ ಮೂಲಕ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರನ್ನು ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ಅವರು ಸ್ವಾಗತಿಸಿದರು. ಸುಡಾನ್‌ನಿಂದ ಬಂದವರಿಗೆ ಏರ್ಪೋಟ್ ಒಳ ಭಾಗದಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿದೆ. ಆಯುಕ್ತ ರಣದೀಪ್ ಅವರು ಬೆಂಗಳೂರು ಗ್ರಾಮಾಂತರ ಡಿಹೆಚ್ಒ ಅವರೊಂದಿಗೆ ಆಗಮಿಸಿದ್ದರು.

ಇದನ್ನೂ ಓದಿ: Operation Kaveri: ಸುಡಾನ್‌ನಲ್ಲಿ 68 ಕನ್ನಡಿಗರು ಅತಂತ್ರ; ನೆರವಿಗೆ ಬಾರದ ಆಪರೇಷನ್ ಕಾವೇರಿ ಟೀಂ

Operation Kaveri: ಸುಡಾನ್ ಸಂಘರ್ಷದ ಪರಿಸ್ಥಿತಿ ಬಿಚ್ಚಿಟ್ಟ ಚಂದ್ರಶೇಖರ್

ಆಪರೇಷನ್ ಕಾವೇರಿ ಮೂಲಕ ಬೆಂಗಳೂರು ತಲುಪಿರುವ ಥಣಿಸಂದ್ರ ಮೂಲದ ಚಂದ್ರಶೇಖರ್ ಅವರು ಅಲ್ಲಿನ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು. ಕುಟುಂಬಸ್ಥರು ಚಂದ್ರಶೇಖರ್ ಅವರಿಗೆ ಸ್ವೀಟ್ ತಿನ್ನಿಸಿ ಸ್ವಾಗತಿಸಿದರು. ಇನ್ನಷ್ಟು ಜನರು ಸುಡಾನ್‌ನಲ್ಲಿ ಸಿಲುಕಿದ್ದಾರೆ. ಸುಡಾನ್‌ನಲ್ಲಿ ಸಿಲುಕಿರುವ ಜನರು ಹತ್ತಿರದ ಏರ್ಪೋರ್ಟ್‍‌ಗೆ ತೆರಳವುದು ಕಷ್ಟಕರವಾಗಿದೆ ಎಂದು ಚಂದ್ರಶೇಖರ್ ಅವರು ತಿಳಿಸಿದರು.

Exit mobile version