ಹಾವೇರಿ: ಬಿಸಿಯೂಟ ಸೇವಿಸಿ 41 ವಿದ್ಯಾರ್ಥಿಗಳು ಅಸ್ವಸ್ಥವಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಮಕರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ಅಸ್ವಸ್ಥಗೊಂಡ (Students Fall Sick) ವಿದ್ಯಾರ್ಥಿಗಳನ್ನು ಅಕ್ಕಿ ಆಲೂರಿನ ಸರ್ಕಾರಿ ಆಸ್ಪತ್ರೆಯಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ತಹಸೀಲ್ದಾರ್ ಟಿ.ಬಿ. ಕೋರವರ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ
ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದ ಆಹಾರ ಸುರಕ್ಷತಾ ಅಧಿಕಾರಿ
ಮೈಸೂರು: ಲಂಚ ಸ್ವೀಕರಿಸುವಾಗ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ತಿಲಕ್ ನಗರ ಕಚೇರಿಯಲ್ಲಿ ನಡೆದಿದೆ. ಆಹಾರ ಸುರಕ್ಷತಾ ಅಧಿಕಾರಿ ಲೋಕೇಶ್ ಬಂಧಿತರು.
ಅಂಗಡಿ ಪರವಾನಗಿ ನವೀಕರಣ ಮಾಡಿಕೊಡಲು ನಂಜನಗೂಡಿನ ರಘು ಎಂಬುವವರ ಬಳಿ 7 ಸಾವಿರ ರೂ. ಲಂಚಕ್ಕೆ ಲೋಕೇಶ್ ಬೇಡಿಕೆ ಇಟ್ಟಿದ್ಧಾರೆ. ಹಣವನ್ನು ಗೂಗಲ್ ಪೇ ಮಾಡಿಸಿಕೊಳ್ಳುವಾಗ ಲೋಕಾಯುಕ್ತ ಎಸ್. ಪಿ. ಸುರೇಶ್ ಬಾಬು ಹಾಗೂ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದ ತಂಡ ದಾಳಿ ಮಾಡಿ ಬಂಧಿಸಿದೆ. 2015ರಲ್ಲೂ ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ಲಂಚ ಪಡೆದು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ | Electric shock: ಕಂಬ ಬದಲಿಸುವಾಗ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ
ಮನೆಯ ಬೀಗ ಮುರಿದು 4 ಲಕ್ಷ ರೂ., 60 ಗ್ರಾಂ ಚಿನ್ನ ಕಳ್ಳತನ
ತುಮಕೂರು: ಹಾಡಹಗಲೇ ಮನೆಯ ಬೀಗ ಮುರಿದು ಒಡವೆ ಹಾಗೂ ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ಜಿಲ್ಲೆಯ ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ಆಶಾ ಎಂಬುವವರ ಮನೆಯ ಬೀರುವಿನಲ್ಲಿದ್ದ 4 ಲಕ್ಷ ರೂ. ನಗದು ಹಾಗೂ 60 ಗ್ರಾಂ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರೀಶಿಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.