ಬೆಂಗಳೂರು: ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2022-23ನೇ ಸಾಲಿನಲ್ಲಿ ಒಟ್ಟು 4,938 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆರ್. ವೆಂಕಟೇಶ್ ತಿಳಿಸಿದ್ದಾರೆ.
2022-23ನೇ ಸಾಲಿನ ಆರ್ಥಿಕ ಪ್ರಗತಿ ಕುರಿತು ಮಾಹಿತಿ ನೀಡಿದ ಅವರು, “ಕಳೆದ ವಿತ್ತೀಯ ಸಾಲಿನಲ್ಲಿ ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯ (NPA) ಪ್ರಮಾಣ ಶೇ.4.10ರಷ್ಟಿದೆ. ಆದರೆ, ನಿವ್ವಳ ಎನ್‌ಪಿಎ ಪ್ರಮಾಣ ಶೂನ್ಯವಿದೆ. ಕಳೆದ ಸಾಲಿನಲ್ಲಿ ಬ್ಯಾಂಕ್ ಅವಕಾಶಪೂರ್ವ 12.07 ಕೋಟಿ ರೂ. ಲಾಭ ಗಳಿಸಿದೆ. ಬ್ಯಾಂಕ್‌ನ ಸ್ವಂತ ನಿಧಿ 118.91 ಕೋಟಿ ರೂ. ಇದೆ” ಎಂದರು.
“ಕಳೆದ 60 ವರ್ಷದಿಂದ ಸಂಸ್ಥೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದು, ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಕಾಲಕಾಲಕ್ಕೆ ನೂತನ ಸಾಲದ ಯೋಜನೆಗಳು, ವಾಣಿಜ್ಯ ಬ್ಯಾಂಕ್‌ಗಳಿಗೆ ಸರಿ ಸಮನಾದ ಬಡ್ಡಿದರದ ಪರಿಚಯ, ಆಧುನಿಕ ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ರೀತಿ ಅಪ್‌ಡೇಟ್ ಆಗಿದೆ. ಹಾಗೆಯೇ, ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಚಿನ್ನಾಭರಣಗಳ ಸಾಲದ ಮೇಲೆ ಶೇ.7.5ರಷ್ಟು ಮಾತ್ರ ಬಡ್ಡಿದರ ಇದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Samosa Singh : ಉದ್ಯೋಗ ಬಿಟ್ಟು, ಮನೆ ಮಾರಿ ಸಮೋಸಾ ಮಾರಾಟದಲ್ಲೇ 45 ಕೋಟಿ ರೂ. ವಹಿವಾಟು ನಡೆಸಿದ ಯುವ ದಂಪತಿ!