Site icon Vistara News

ಗಾಂಜಾ ಮಾರುತ್ತಿದ್ದವನ 50‌ ಲಕ್ಷ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಸಿಸಿಬಿ!

Drugs worth over Rs 2 crore seized, two peddlers arrested

ಚಾಮರಾಜನಗರ: ಗಾಂಜಾ ಮಾರಾಟದ ಆರೋಪದಲ್ಲಿ ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿದೆ. ಆತನ 50‌ ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಈತ ಚಾಮರಾಜನಗರದಲ್ಲಿ ಎಂಟು ಎಕರೆ ಜಾಗ ತೆಗೆದುಕೊಂಡಿದ್ದ. ಅಲ್ಲದೆ, ಪತ್ನಿ, ಮಕ್ಕಳ ಹೆಸರಿನಲ್ಲಿ ಸಹ ಆಸ್ತಿಗಳನ್ನು ಖರೀದಿಸಿದ್ದ. ಗಾಂಜಾ ಕಳ್ಳಸಾಗಣೆಯಿಂದ ಮಾಡಿದ್ದ ಆಸ್ತಿಯನ್ನು ಈಗ ಪೊಲೀಸರು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆದಾಯ ತೆರಿಗೆಯನ್ನು ವಂಚನೆ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಇದೇ ವೇಳೆ ಮಲ್ಲೇಶ್‌ ಹೆಸರಿನ ಐದು ಬ್ಯಾಂಕ್ ಖಾತೆಯಲ್ಲಿದ್ದ ೩ ಲಕ್ಷ ರೂಪಾಯಿಯನ್ನು ಸಹ ನಿಷ್ಕ್ರಿಯಗೊಳಿಸಲಾಗಿದೆ.

ಈ ಹಿಂದೆ ಗ್ರಾಮಾಂತರ ಪೊಲೀಸರು ಅಜಯ್ ಕುಮಾರ್ ಎಂಬಾತನ ಆಸ್ತಿಯನ್ನು ಮೊದಲ ಬಾರಿಗೆ ಜಪ್ತಿ ಮಾಡಿದ್ದರು. ಈಗ ಡ್ರಗ್ ಪೆಡ್ಲರ್‌ಗೆ ಬುದ್ಧಿ ಕಲಿಸಲು ಈ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ| ಚಿತ್ರದುರ್ಗದ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದವರ ಬಂಧನ

Exit mobile version