Site icon Vistara News

ಶಿವನ ದರ್ಶನಕ್ಕೆ ಹೋದವರು ಮಸಣಕ್ಕೆ; ನದಿಗೆ ಟ್ಯಾಕ್ಸಿ ಬಿದ್ದು ಕರ್ನಾಟಕದ ಇಬ್ಬರು ಸೇರಿ 6 ಸಾವು

Uttarakhand Accident

6 pilgrims returning from Adi Kailash killed as car plunges into Kali river In Uttarakhand

ಡೆಹ್ರಾಡೂನ್:‌ ಉತ್ತರಾಖಂಡದಲ್ಲಿ ಮಂಗಳವಾರ ಮಂಗಳವಾರ (ಅಕ್ಟೋಬರ್‌ 24) ಭಾರಿ ದುರಂತ ಸಂಭವಿಸಿದೆ. ಆದಿ ಕೈಲಾಸ ಯಾತ್ರೆ (Adi Kailash) ಮುಗಿಸಿಕೊಂಡು ಬರುತ್ತಿದ್ದ ಟ್ಯಾಕ್ಸಿಯೊಂದು ಕಾಳಿ ನದಿಗೆ (Kali River) ಉರುಳಿದ್ದು, ಕರ್ನಾಟಕದ ಇಬ್ಬರು ಸೇರಿ ಆರು ಯಾತ್ರಿಕರು ಮೃತಪಟ್ಟಿದ್ದಾರೆ. ಕರ್ನಾಟಕದ (Karnataka) ಬೆಂಗಳೂರಿನ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ಉತ್ತರಾಖಂಡದ (Uttarakhand) ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆದಿ ಕೈಲಾಸ ಯಾತ್ರೆ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ಡರ್ಚುಲಾ-ಲಿಪುಲೇಖ್‌ ರಸ್ತೆಯ ಲಖನ್‌ಪುರ ಬಳಿ ಇರುವ ಕಾಳಿ ನದಿಗೆ ಟ್ಯಾಕ್ಸಿ ಉರುಳಿದೆ. “ಅಪಾಯಕಾರಿಯಾಗಿರುವ ಭೂಪ್ರದೇಶ ಹಾಗೂ ಕತ್ತಲು ಇರುವ ಕಾರಣ ಟ್ಯಾಕ್ಸಿ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಟ್ಯಾಕ್ಸಿಯು ನದಿಗೆ ಬಿದ್ದಿದೆ” ಎಂದು ಪಿಥೋರಗಢ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್ವರ್‌ ಸಿಂಗ್‌ ಮಾಹಿತಿ ನೀಡಿದರು. ಆದಾಗ್ಯೂ, ಮೃತಪಟ್ಟವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಪುಷ್ಕರ್‌ ಸಿಂಗ್‌ ಧಾಮಿ ಸಂತಾಪ

ಮಂಗಳವಾರ ರಾತ್ರಿ ದುರಂತ ಸಂಭವಿಸಿದ ಕಾರಣ ರಾತ್ರಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿಲ್ಲ. ಬುಧವಾರ (ಅಕ್ಟೋಬರ್‌ 25) ಬೆಳಗ್ಗೆ ಶವಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸಂತಾಪ ಸೂಚಿಸಿದ್ದಾರೆ. “ಕಾಳಿ ನದಿಗೆ ಟ್ಯಾಕ್ಸಿ ಉರುಳಿ ಆರು ಜನ ಮೃತಪಟ್ಟಿರುವ ಸುದ್ದಿ ತಿಳಿದು ಆಘಾತವಾಗಿದೆ. ಮೃತರ ಕುಟುಂಬಸ್ಥರ ದುಃಖದಲ್ಲಿ ನಾನು ಕೂಡ ಪಾಲುದಾರ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Land Slide : ಉತ್ತರಾಖಂಡದಲ್ಲಿ ಭೂಕುಸಿತದಲ್ಲಿ ಮಣ್ಣಿನಡಿ ಸಿಲುಕಿದ 4 ತಿಂಗಳ ಮಗು, ಇಬ್ಬರು ಮಹಿಳೆಯರ ಸಾವು

ಉತ್ತರಾಖಂಡದ ನೈನಿತಾಲ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ ಬಸ್‌ ಕಂದಕಕ್ಕೆ ಬಿದ್ದು ಏಳು ಜನ ಮೃತಪಟ್ಟಿದ್ದರು. ನೈನಿತಾಲ್‌ನ ಘಾಟ್‌ಗಡ್‌ ಬಳಿಯ ಕಲಧುಂಗಿ ರಸ್ತೆ ಮಾರ್ಗವಾಗಿ ಭಾನುವಾರ (ಅಕ್ಟೋಬರ್‌ 8) ರಾತ್ರಿ ಸಂಚರಿಸುತ್ತಿದ್ದ ಬಸ್‌ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದರು. ಇವರಲ್ಲಿ ಏಳು ಜನ ಮೃತಪಟ್ಟರೆ, ಇನ್ನೂ 25 ಜನರನ್ನು ರಕ್ಷಿಸಲಾಗಿದೆ. ಬಸ್‌ನಲ್ಲಿದ್ದವರನ್ನು ರಕ್ಷಣೆ ಮಾಡಲು ಸಿಬ್ಬಂದಿಯು ತಡರಾತ್ರಿಯೂ ಕಾರ್ಯಾಚರಣೆ ನಡೆಸಲಾಗಿತ್ತು.

Exit mobile version