ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಈ ಬಾರಿ 68 ಮಂದಿಗೆ ನೀಡಲಾಗಿದೆ. ಇದರ ಜತೆಗೆ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇವರಲ್ಲಿ ನೂರು ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ನೀಡಿರುವುದು ವಿಶೇಷವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗೆ ಎರಡು ಎಕರೆ ಸ್ವಂತ ಜಾಗ ನೀಡಿದ್ದ ಹುಚ್ಚಮ್ಮ, ರಾಮನಗರ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡಗೆ ಹಾಗೂ ಇಸ್ರೋ ಸಂಸ್ಥೆಯ ಮುಖ್ಯಸ್ಥರಾದ ಸೋಮನಾಥ್ ಅವರಿಗೂ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇವರಲ್ಲಿ 13 ಮಹಿಳೆಯರು, ಒಬ್ಬರು ಮಂಗಳಮುಖಿಗೆ ಸಹ ಪ್ರಶಸ್ತಿ ದೊರೆತಿದೆ.
ಸಂಗೀತ ನೃತ್ಯ ಕ್ಷೇತ್ರದಿಂದ ಸಾಹಿತ್ಯ ಕ್ಷೇತ್ರದವರೆಗೆ ಪೂರ್ಣ ಪಟ್ಟಿ ಇಲ್ಲಿದೆ
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಎಲ್ಲ ಕ್ಷೇತ್ರಗಳನ್ನ ನಾವು ಪರಿಗಣನೆ ಮಾಡಿದ್ದೇವೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಿಂದ ಸ್ವಾತಂತ್ರ್ಯ ಹೋರಾಟಗಾರರ ವರೆಗೆ
ಇದನ್ನೂ ಓದಿ: Indira Gandhi : ಇಂದಿರಾ ಗಾಂಧಿಯಂಥ ಜನಪರ-ಜನಪ್ರಿಯ ಪ್ರಧಾನಿ ಮತ್ತೊಬ್ಬರು ಬಂದಿಲ್ಲ: ಸಿಎಂ ಸಿದ್ದರಾಮಯ್ಯ