Site icon Vistara News

Road Accident: ಬೊಲೆರೊ- ಸಾರಿಗೆ ಬಸ್ ಡಿಕ್ಕಿಯಾಗಿ 7 ಮಂದಿಗೆ ಗಾಯ

Road accident

ಗದಗ: ಬೊಲೆರೊ ವಾಹನ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಏಳು ಜನರಿಗೆ ಗಾಯಗಳಾಗಿರುವ ಘಟನೆ (Road Accident) ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ನಡೆದಿದೆ.

ಸೀಮಂತ ಕಾರ್ಯಕ್ರಮಕ್ಕಾಗಿ ಇಳಕಲ್ ತಾಲೂಕಿನ ಹುಲಿಬೆಂಜಿ ಗ್ರಾಮದಿಂದ ಹುಬ್ಬಳ್ಳಿಗೆ ಬೊಲೆರೊ ವಾಹನ ಹೊರಟಿತ್ತು. ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಸಾರಿಗೆ ಬಸ್ ಹೋಗುತ್ತಿತ್ತು. ಕಲಕೇರಿ ಗ್ರಾಮದ ಬಳಿ ಎರಡು ವಾಹನಗಳು ಡಿಕ್ಕಿಯಾಗಿ ಬೊಲೆರೊ ವಾಹನದಲ್ಲಿದ್ದ 7 ಮಂದಿ ಗಾಯಗೊಂಡಿದ್ದಾರೆ. ಅವರ ಅವರನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಟ್ರ್ಯಾಕ್ಟರ್‌- ಲಾರಿ ಮುಖಾಮುಖಿ ಡಿಕ್ಕಿಯಾಗಿ ನಾಲ್ವರಿಗೆ ಗಾಯ

ಹುಬ್ಬಳ್ಳಿ: ಟ್ರ್ಯಾಕ್ಟರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಬಳಿ ನಡೆದಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಯಾಬಿನ್ ತುಂಬಿದ್ದ ಟ್ರ್ಯಾಕ್ಟರ್ ಹಾಗೂ ಬಣ್ಣ ತುಂಬಿದ್ದ ಲಾರಿ ನಡುವೆ ಡಿಕ್ಕಿಯಾಗಿ 4 ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ | PSI Scam: ಪಿಎಸ್‌ಐ ನೇಮಕಾತಿ ಮರುಪರೀಕ್ಷೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌; ಸರ್ಕಾರದ ನಿರ್ಧಾರಕ್ಕೆ ಓಕೆ

ನಡು ರಸ್ತೆಯಲ್ಲೇ ಯುವಕನ ಬರ್ಬರ ಕೊಲೆ; ಕೆಲಸ ಮುಗಿಸಿ ಬರುವಾಗ ಅಟ್ಯಾಕ್

Young man murdered in Belagavi

ಗೋಕಾಕ (ಬೆಳಗಾವಿ): ಕಂಪನಿಯೊಂದರ ಕೆಲಸ ಮುಗಿಸಿಕೊಂಡು ಬೈಕ್​​ನಲ್ಲಿ ತಮ್ಮ ಮನೆಗೆ ಮರಳುತ್ತಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder case) ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ (Belagavi News) ಗೋಕಾಕ ತಾಲೂಕಿನ ಶಿವಾಪೂರ ಹೊರವಲಯ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪದ ಗುರುವಾ ರಾತ್ರಿ 8.30ಕ್ಕೆ ಈ ಘಟನೆ ನಡೆದಿದೆ. ಶಿವಶಂಕರ ಶಿವಪುತ್ರ ಮಗದುಮ್ಮ ಸಾವಳಗಿಯ ಮುತ್ನಾಳ ನಿವಾಸಿ (35) ಮೃತ ಯುವಕ.

ಶಿವಶಂಕರ ಅವರ ಮೇಲೆ ಮೊದಲೇ ಕಣ್ಣಿಟ್ಟಿದ್ದ ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಊಟ ಮಾಡುವ ನೆಪ ಮಾಡಿ ಹೊಂಚು ಹಾಕಿ ಕುಳಿತಿದ್ದರು. ಶಿವಶಂಕರ ಅವರು ಬೈಕ್‌ನಲ್ಲಿ ಬರುತ್ತಿದ್ದಂತೆಯೇ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ದಾಳಿ ಮಾಡಲಾಗಿದೆ. ಜನನಿಬಿಡವಾದ ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬೆಳಗಾವಿಯ ರಿಲಯನ್ಸ್ ಕಂಪನಿಯಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಶಂಕರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗೋಪಾಲ್ ರಾಥೋಡ್ ಪಿಎಸ್ಐ ಕಿರಣ್ ಮೋಹಿತ್ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಶಿವಶಂಕರ ಮತ್ತು ಈ ತಂಡ ನಡುವೆ ಯಾವುದಾದರೂ ಹಳೆ ದ್ವೇಷವಿದ್ದು, ಅದೇ ಕಾರಣಕ್ಕಾಗಿ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Young man murdered in Belagavi

ಹಂತಕರು ಊಟ ಮಾಡುವ ನೆಪ ಮಾಡಿಕೊಂಡು ದಾರಿ ಬದಿಯಲ್ಲಿ ಕುಳಿತು ಹೊಂಚು ಹಾಕುತ್ತಿದ್ದರು. ಕೊಲೆ ಮಾಡಿದ ಬಳಿಕ ಆ ಊಟ, ತಿಂಡಿಯ ಪೊಟ್ಟಣಗಳನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version