ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸುಗಳ (7th Pay commission) ಜಾರಿಗೆ ಬದ್ಧತೆ ಪ್ರದರ್ಶಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮುಷ್ಕರದ ಅಸ್ತ್ರವನ್ನು ಕೈಗೆತ್ತಿಕೊಂಡಿರುವ ಸರ್ಕಾರಿ ನೌಕರರ ನಿರ್ಧಾರದಿಂದಾಗಿ ಮಾರ್ಚ್ ಒಂದರಿಂದ ಸರ್ಕಾರಿ ಸೇವೆಗಳು ಬಂದ್ ಆಗಲಿವೆ. ಒಂದೊಮ್ಮೆ ಸರ್ಕಾರ ವರದಿ ಜಾರಿಗೆ ಅಧಿಕೃತ ಘೋಷಣೆ ಮಾಡಿದರೆ ಮಾತ್ರ ಮುಷ್ಕರ ವಾಪಸ್ ಪಡೆಯುತ್ತೇವೆ. ಇಲ್ಲವಾದರೆ ಎಲ್ಲ ರೀತಿಯ ಸರ್ಕಾರಿ ಸೇವೆಗಳು ಬಂದ್ ಆಗಲಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಘೋಷಿಸಿದ್ದಾರೆ.
ಹೀಗಾಗಿ ನಾಳೆಯಿಂದ ರಾಜ್ಯದ ಯಾವುದೇ ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ಆಗುವುದಿಲ್ಲ, ಶಾಲೆಯಲ್ಲಿ ಶಿಕ್ಷಕರು ಇರುವುದಿಲ್ಲ, ಆಸ್ಪತ್ರೆಯ ಒಪಿಡಿಗಳಲ್ಲಿ ವೈದ್ಯರು ಇರುವುದಿಲ್ಲ. ಹಾಗಂತ ಎಲ್ಲ ಸೇವೆಗಳು ಬಂದ್ ಆಗುವುದಿಲ್ಲ. ಕೆಲವೊಂದು ಅಗತ್ಯ ಸೇವೆಗಳು ಯಥಾವತ್ತಾಗಿ ಮುಂದುವರಿಯಲಿವೆ.
ಹಾಗಿದ್ದರೆ ಯಾವ ಸೇವೆಗಳು ಇರುತ್ತವೆ, ಯಾವ ಸೇವೆಗಳು ಇರುವುದಿಲ್ಲ ಎನ್ನುವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಮಾರ್ಚ್ 1ರಿಂದ ಬಂದ್ ಆಗಲಿರುವ ಇಲಾಖೆಗಳು
– ವಿಧಾನಸೌಧದ ಎಲ್ಲಾ ಕಚೇರಿಗಳು ಬಂದ್
– ಸಚಿವಾಲಯದ ಎಲ್ಲಾ ಕಚೇರಿಗಳು
– ಬಿಬಿಎಂಪಿ
– ತಾಲೂಕು ಕಚೇರಿ
– ಜಿಲ್ಲಾಧಿಕಾರಿ ಕಚೇರಿ
– ಗ್ರಾಮ ಪಂಚಾಯಿತಿ
– ಸರ್ಕಾರಿ ಶಾಲೆಗಳು
– ಸರ್ಕಾರಿ ಆಸ್ಪತ್ರೆ
– ಪ್ರಾಥಮಿಕ ಆರೋಗ್ಯ ಕೇಂದ್ರ
– ಪುರಸಭೆ
– ಸರ್ಕಾರಿ ಹಾಸ್ಟೆಲ್ ಗಳು
– ಪುರಸಭೆ
– ತಾಲೂಕು ಕಚೇರಿ, ಜಿಲ್ಲಾ ಕಚೇರಿ
– ಆರೋಗ್ಯ ಇಲಾಖೆ
– ಕಂದಾಯ ಇಲಾಖೆ
ಮುಷ್ಕರವಿದ್ದರೂ ಸಿಗುವ ಅಗತ್ಯ ಸೌಲಭ್ಯಗಳು
– ಆಸ್ಪತ್ರೆ ತುರ್ತು ಚಿಕಿತ್ಸೆ
– ಕಾವೇರಿ ನೀರು ಸರಬರಾಜು
– ವಿದ್ಯುತ್
– ಕೆಎಸ್ಆರ್ಟಿಸಿ
– ಬಿಎಂಟಿಸಿ ಬಸ್ ಸೌಲಭ್ಯ
ಇದನ್ನೂ ಓದಿ : 7th pay commission : ಎಸ್ಮಾ ಹೇರಿದರೂ ಹೆದರಲ್ಲ, ಹೋರಾಟ ನಿಲ್ಲಲ್ಲ ಎಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ