Site icon Vistara News

7th Pay Commission: ರಾಜ್ಯ 7ನೇ ವೇತನ ಆಯೋಗದ ವರದಿ ಸಲ್ಲಿಕೆ ಅವಧಿ 6 ತಿಂಗಳು ವಿಸ್ತರಣೆ

Karnataka Election Results- 217 Crorepatis In 224 Member Karnataka Assembly

ಬೆಂಗಳೂರು: ರಾಜ್ಯ 7ನೇ ವೇತನ ಆಯೋಗ (7th Pay Commission) ತನ್ನ ಕಾರ್ಯ ಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗುವಂತೆ ವೇತನ ಆಯೋಗದ ಕಾಲಾವಧಿಯನ್ನು ಮೇ 19ರಿಂದ 6 ತಿಂಗಳ ಕಾಲ ವಿಸ್ತರಿಸಲಾಗಿದೆ. ರಾಜ್ಯಪಾಲರ ಆದೇಶಾನುಸಾರ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಉಮಾ. ಕೆ ಅವರು ವೇತನ ಆಯೋಗದ ಕಾಲಾವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳ ಪರಿಷ್ಕರಣೆ ಹಾಗೂ ನೂತನ ವೇತನ ರಚನೆಗಾಗಿ 2022ರ ನವೆಂಬರ್‌ 11ರಂದು ನಿವೃತ್ತ ಐಎಎಸ್‌ ಅಧಿಕಾರಿ ಸುಧಾಕರ್‌ ರಾವ್‌ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ಆದರೆ ಆಯೋಗದ ಸಮಾಲೋಚನಾ ಕಾರ್ಯಗಳು ಇನ್ನೂ ಪ್ರಗತಿಯಲ್ಲಿರುವುದರಿಂದ ವೇತನ ಆಯೋಗದ ವರದಿ ಸಲ್ಲಿಕೆ ಅವಧಿಯನ್ನು ಮೇ 19ರಿಂದ 6 ತಿಂಗಳು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ | Karnataka CM: 50:50 ಎನ್ನುತ್ತಿದ್ದ ಹೈಕಮಾಂಡ್‌ಗೆ 60:60 ಎಂದ ಸಿದ್ದರಾಮಯ್ಯ-ಡಿಕೆಶಿ: ಮತ್ತಷ್ಟು ಕಗ್ಗಂಟಾದ ಸಿಎಂ ಆಯ್ಕೆ

Exit mobile version