Site icon Vistara News

ಪ್ರವಾಸಕ್ಕೆಂದು ಖುಷಿಯಿಂದ ಮೈಸೂರಿಗೆ ಬಂದು ಶವವಾದರು; ಒಂದೇ ಕುಟುಂಬದ 10 ಮಂದಿ ದುರ್ಮರಣ

8 members of a family died after their car hit by bus in mysore

#image_title

ಮೈಸೂರು: ಇಲ್ಲಿನ ಕೊಳ್ಳೆಗಾಲ-ಟಿ.ನರಸಿಪುರ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತವಾಗಿದ್ದು (Road Accident), ಮಗು ಸೇರಿ, ಒಂದೇ ಕುಟುಂಬದ 10 ಮಂದಿ ಮೃತಪಟ್ಟಿದ್ದಾರೆ. ಇವರೆಲ್ಲ ಬಳ್ಳಾರಿ ಮೂಲದವರಾಗಿದ್ದು, ಇನ್ನೋವಾ ಕಾರಿನಲ್ಲಿ ಪ್ರವಾಸಕ್ಕೆಂದು ಮೈಸೂರಿನ ಕಡೆಗೆ ಬಂದಿದ್ದರು. ಇವರ ಕಾರಿಗೆ ಕುರುಬೂರು ಗ್ರಾಮದ ಪಿಂಜರ ಪೋಲ್​​ ಎಂಬಲ್ಲಿ ಖಾಸಗಿ ಬಸ್​ ಡಿಕ್ಕಿಯಾಗಿದೆ. ಕಾರು ನುಜ್ಜುಗುಜ್ಜಾಗಿದೆ. ಅತ್ಯಂತ ಭೀಕರ ಅಪಘಾತವಾಗಿದ್ದು, ಕಾರಿನಲ್ಲಿದ್ದ ಒಂದಿಬ್ಬರ ತಲೆಗಳು ಕತ್ತರಿಸಿ ಬಿದ್ದಿವೆ. ಕಾರಿನ ಅವಶೇಷ ಯಾವುದು, ಮನುಷ್ಯರ ದೇಹ ಯಾವುದು ಎಂಬುದನ್ನು ಗುರುತಿಸಲು ಕಷ್ಟವಾಗುವಷ್ಟು ಭಯಾನಕವಾಗಿ ಅಪಘಾತ ಆಗಿದೆ.

ಬಸ್​ನಲ್ಲಿದ್ದ ಹಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಕ್ಸಿಡೆಂಟ್ ಆಗುತ್ತಿದ್ದಂತೆ ಸ್ಥಳೀಯರೇ ಇಲ್ಲಿಗೆ ಧಾವಿಸಿ, ಕಾರಿನಲ್ಲಿ ಇದ್ದ ಮೂರ್ನಾಲ್ಕು ಜನರನ್ನು ಹೊರಗೆ ತೆಗೆದಿದ್ದಾರೆ. ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಆಗಮಿಸಿದ್ದಾರೆ. ಆಂಬ್ಯುಲೆನ್ಸ್​​ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತವಾದ ಕಾರು ಹಳದಿ ಬೋರ್ಡ್​ನದ್ದಾಗಿದ್ದು, ಇವರೆಲ್ಲ ಯಾವುದೋ ಬಾಡಿಗೆ ಕಾರು ಮಾಡಿಸಿಕೊಂಡು ಪ್ರವಾಸಕ್ಕೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಈ ಅಪಘಾತದಲ್ಲಿ ಬಳ್ಳಾರಿ ಮೂಲದ ಜನಾರ್ದನ್, ಪುನೀತ್, ಶಶಿಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಇದರಲ್ಲಿ ಪುನೀತ್ ಇನ್ನೂ ನಾಲ್ಕು ವರ್ಷದ ಮಗು. ಶಶಿಕುಮಾರ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇವರಿಗೆ ಚಾಮರಾಜನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಎಲ್ಲರನ್ನೂ ಮೈಸೂರಿನ ಆಸ್ಪತ್ರೆಗೆ ರವಾನಿಸಲು ಸಿದ್ಧತೆ ನಡೆದಿದೆ.

ಡಿಕ್ಕಿ ಹೊಡೆದ ಬಸ್​

ಇದನ್ನೂ ಓದಿ:ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಸಾವು; ಭಾವಿ ಪತಿ ಜತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಭಾನುವಾರ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಲಾರಿ ಮತ್ತು ಇಂಡಿಕಾ ಕಾರಿನ ನಡುವೆ ಡಿಕ್ಕಿಯಾಗಿ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಕಾ ಕಾರು ಟಯರ್‌ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಬದಿಯ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ರಾಜಪ್ಪ ಬನಗೋಡಿ, ರಾಘವೇಂದ್ರ, ಅಕ್ಷಯ ಶಿವಶರಣ, ಜಯಶ್ರೀ, ರಾಖಿ(4) , ರಶ್ಮಿಕಾ(2) ಮೃತರು. ವೇಗವಾಗಿ ಕಾರು ಲಾರಿಗೆ ಡಿಕ್ಕಿಹೊಡೆದಿದ್ದರಿಂದ ಮೃತದೇಹಗಳನ್ನು ಹೊರಗಡೆ ತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸಪಟ್ಟಿದ್ದರು.

Exit mobile version