Site icon Vistara News

ಪ್ರಾಮಾಣಿಕ ಪಿಎಸ್‌ಐ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ: ಗೃಹ ಸಚಿವರಿಗೆ 8 ಶಾಸಕರ ಪತ್ರ

ಆರಗ ಜ್ಞಾನೇಂದ್ರ

ಬೆಂಗಳೂರು: ಕೆಲವರು ಮಾಡಿದ ತಪ್ಪಿಗೆ ಸಂಪೂರ್ಣವಾಗಿ ಪಿಎಸ್‌ಐ ನೇಮಕಾತಿಯನ್ನು ರದ್ದುಪಡಿಸಿರುವುದು ಸರಿಯಲ್ಲ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸುವ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಎಂಟು ಶಾಸಕರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ ಬೆಳಕಿಗೆ ಬಂದಿದ್ದರಿಂದ ತನಿಖೆ ನಡೆಸುವ ಮೊದಲೇ ನೇಮಕಾತಿ ರದ್ದುಪಡಿಸಿರುವುದು ಸಮಂಜಸವಲ್ಲ. ಸರ್ಕಾರದ ಈ ನಿರ್ಧಾರದಿಂದ ಬಡಮಕ್ಕಳಿಗೆ ಅನ್ಯಾಯವಾಗಿದೆ. ತಪ್ಪು ಮಾಡಿದವರು ಹಾಗೂ ನ್ಯಾಯವಾಗಿ ಪರೀಕ್ಷೆ ಬರೆದವರನ್ನು ಬೇರ್ಪಡಿಸುವ ಕೆಲಸ ಆಗಬೇಕು ಎನ್ನುವುದು ಈ ಶಾಸಕರ ಆಗ್ರಹ.

ಕೆ.ಎಸ್.ಲಿಂಗೇಶ್, ಪಿ.ರಾಜೀವ್, ಸುನಿಲ್ ಬಿ ನಾಯ್ಕ್, ರಘುಪತಿ ಭಟ್‌, ರಾಜಕುಮಾರ ಪಾಟೀಲ್ ತೇಲ್ಕೂರ, ಲಾಲಾಜಿ ಆರ್ ಮೆಂಡನ್, ಹರೀಶ್ ಪೂಂಜ, ಜೆ.ಎನ್.ಗಣೇಶ್, ಕೆ ರಾಘವೇಂದ್ರ ಹಿಟ್ನಾಳ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ ಶಾಸಕರು. ಇವರಲ್ಲಿ ಆಡಳಿತ ಪಕ್ಷದ ಶಾಸಕರೇ ಹೆಚ್ಚಾಗಿದ್ದಾರೆ.

ಇದನ್ನೂ ಓದಿ | PSI Scam ಮುಖಭಂಗದ ನಂತರ ಇದೀಗ ಶಿಕ್ಷಕ ಪರೀಕ್ಷೆಯಲ್ಲಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

Exit mobile version