ಆನೇಕಲ್: ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಜನಾ ಹೆಸರಿನ 14 ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿದೆ. ಈ ಚಿರತೆಯನ್ನು ಜೂನ್ 2009 ರಲ್ಲಿ ಮೈಸೂರಿನಿಂದ ತರಲಾಗಿತ್ತು. ಶುಕ್ರವಾರ ಮುಂಜಾನೆ ಉದ್ಯಾನವನದಲ್ಲಿ ಈ ಚಿರತೆ ಸಾವನ್ನಪ್ಪಿದೆ.
ಸಾಮಾನ್ಯವಾಗಿ ಕಾಡಿನಲ್ಲಿ ಚಿರತೆಗಳ ಜೀವಿತಾವಧಿ ಸುಮಾರು 10 ವರ್ಷಗಳಾಗಿರುತ್ತವೆ. ಆದರೆ ಸಂಜನಾಗೆ 14 ವರ್ಷ ಆಗಿದ್ದು ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು.
ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿಗಳು ಚಿರತೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ.
ಇದನ್ನೂ ಓದಿ: Viral Video: ಎರಡು ಹುಲಿಗಳ ಜಾಲಿ ಮೂಡ್ ಆಟ; ಕಣ್ಣಿಗೆ ಹಬ್ಬವೆಂದ ನೆಟ್ಟಿಗರು