Site icon Vistara News

ಡೈವೊರ್ಸ್‌ ಬೇಕೆಂದು ಬಂದವರನ್ನು ಒಂದು ಮಾಡಿದ ನ್ಯಾಯಾಧೀಶರು

ವಿಛೆದನ ಕೋರಲು ಬಂದ ದಂಪತಿಗಳನ್ನು

ಧಾರವಾಡ: ವಿಚ್ಛೇದನ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಮದುವೆಯಾದ ತಿಂಳೊಳಗೇ ನ್ಯಾಯಾಲಯದ ಮೆಟ್ಟಿಲು ಹತ್ತಿದ್ವರೂ ಇದ್ದಾರೆ. ಆದರೆ ಇಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.

ನಮಗೆ ಈ ಮದುವೆ ಬಂಧನ ಸಾಕಾಗಿದೆ ಎಂದು ಗಂಡ ಹೆಂಡತಿ ನ್ಯಾಯಾಲಯಕ್ಕೆ ವಿಚ್ಛೇದನ ಕೋರಲು ಬಂದಿದ್ದಾರೆ. ವಿಚ್ಛೇದನ ಕೋರಲು ಬಂದ ದಂಪತಿಗಳನ್ನು ನ್ಯಾಯಾಧೀಶರೇ ಒಂದು ಮಾಡಿದ ಘಟನೆ ಧಾರವಾಡ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಅಪರೂಪದ ರಾಜಿ ಸಂಧಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಸಾಕ್ಷಿಯಾಗಿದ್ದಾರೆ.

ಬಾದಾಮಿ ತಾಲೂಕಿನ ನೀರಲಕೇರಿಯ ಯಲ್ಲಪ್ಪ ಕುರಿ ಹಾಗೂ ಪತ್ನಿ ಸುಧಾ ನಡುವೆ ಮನಸ್ತಾಪ ಆಗಿತ್ತು. ಗಂಡ ಹೆಂಡತಿಯಲ್ಲಿ ವೈಮನಸ್ಸು ಬಂದಿತ್ತು. 12 ವರ್ಷದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಈ ವೇಳೆಗೆ ಇಬ್ಬರಿಗೂ ನಾಲ್ಕು ಮಕ್ಕಳಾಗಿದ್ದರು.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿನ ತವರು ಮನೆಗೆ ಹೊಗಿದ್ದ ಸುಧಾ, ಗಂಡನೊಂದಿಗಿನ ಜಗಳದಿಂದ ಆತ್ಮಹತ್ಯೆಗೂ ಯತ್ನಿಸಿದ್ದರು. ಆತ್ಮಹತ್ಯೆ ಯತ್ನದ ಬಳಿಕ ಧಾರವಾಡ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಕೊನೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಪಡೆದು, ವಿಚ್ಛೇದನಕ್ಕಾಗಿ ಹಾಗೂ ಗಂಡನ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ಲೋಕ್ ಅದಾಲತ್‌ನಲ್ಲಿ ಇಬ್ಬರನ್ನೂ ನ್ಯಾಯಾಧೀಶರೇ ಒಂದು ಮಾಡಿದ್ದಾರೆ. ಡೈವೊರ್ಸ್‌ ಬೇಕು ಎಂದು ಬಂದವರು ಸ್ವಯಿಚ್ಛೆಯಿಂದ ಒಪ್ಪಿ ದಾಂಪತ್ಯ ಮುಂದುವರಿಸಲು ತೆರಳಿದ್ದಾರೆ.

ಇದನ್ನೂ ಓದಿ: ಧಾರವಾಡ ಉಪವಿಭಾಗಾಧಿಕಾರಿ ಕಾರನ್ನೇ ಜಪ್ತಿ ಮಾಡಿದ ನ್ಯಾಯಾಲಯ !

Exit mobile version