ಬೆಳಗಾವಿ: ಚಿರತೆ ಶೋಧ ಕಾರ್ಯವು (Operation leopard) 22ನೇ ದಿನಕ್ಕೆ ಕಾಲಿಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಗದ ಚಿರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದೆ. ತರಹೇವಾರಿ ಚರ್ಚೆಗಳು ಆರಂಭವಾಗಿದ್ದು, ಮೀಮ್ಸ್‌ಗಳು (Meme) ಸೂಪರ್ ಹಿಟ್ ಆಗಿವೆ.
ಚಿರತೆ ಹೆಸರಲ್ಲಿ ಆಧಾರ ಕಾರ್ಡ್ ಸಿದ್ಧಪಡಿಸಲಾಗಿದ್ದು, ಇದು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿರತೆಯನ್ನು ಮರಾಠಿ ಭಾಷೆಯಲ್ಲಿ ಬಿಬತ್ಯಾ ಎಂದು ಕರೆಯುತ್ತಾರೆ. ಹಾಗಾಗಿ ಬಿಬತ್ಯಾ ಬೆಳಗಾಂವ್ಕರ್ ಹೆಸರಿನಲ್ಲಿ ಸಿದ್ಧಗೊಂಡ ಆಧಾರ್ ಕಾರ್ಡ್ ಇದೀಗ ಸಖತ್ ಸುದ್ದಿಯಲ್ಲಿದೆ. ಮನುಷ್ಯರ ಜತೆಗೆ ಬೆಡ್ ಮೇಲೆ ಚಿರತೆ ಮಲಗಿರುವ ಫೋಟೊ, ವಿಡಿಯೊಗಳು ವೈರಲ್ ಆಗಿವೆ.
ಇದನ್ನೂ ಓದಿ | Operation leopard | ಬೆಳಗಾವಿ ಚಿರತೆ ಸೆರೆಗೆ ಹುಕ್ಕೇರಿ ಶ್ವಾನ, ಶಿವಮೊಗ್ಗ ಆನೆ, ಬೆಂಗಳೂರು ಡ್ರೋಣ್!
ಟ್ರೋಲ್ ಆಯ್ತು ಚಿರತೆ!
ʻʻನಾನು ಬೆಳಗಾವಿ ಬಿಟ್ಟು ಹೋಗಲ್ಲ ಅಂದ್ರೆ ಹೋಗಲ್ಲʼʼ.’ಕೋವಿಡ್ ಜತೆಗೆ ಬದುಕಿದಂಗೆ ಚಿರತೆ ಜತೆಗೂ ಬದುಕುವುದು ಅನಿವಾರ್ಯ’.ʻʻಯಾರಪ್ಪಂದ ಏನೈತಿ, ಬೆಳಗಾವಿ ನಂದೈತಿ ʼʼಎಂದು ಚಿರತೆ ಫೋಟೊ ಜತೆಗೆ ಬರೆದ ಬಹರಗಳು ವೈರಲ್ ಆಗಿವೆ. ಗಣೇಶೋತ್ಸವ ಬಳಿಕವೇ ದರ್ಶನ ಪಡೆದು ನಾನು ಕಾಡಿಗೆ ಹೋಗುವೆ ಎಂಬ ಹಾಸ್ಯಭರಿತ ಟ್ರೋಲ್ ಬರಹಗಳು ಚರ್ಚೆಯಾಗುತ್ತಿವೆ.
ಚಿರತೆ ಸೆರೆಗೆ ಶತಾಯಗತಾಯ ಪ್ರಯತ್ನಿಸುತ್ತಿರುವ ಜಿಲ್ಲಾಡಳಿತ ಹುಕ್ಕೇರಿಯಿಂದ ಶ್ವಾನ, ಶಿವಮೊಗ್ಗದಿಂದ ಆನೆ, ಬೆಂಗಳೂರಿಂದ ಡ್ರೋಣ್ ಮೂಲಕ ಶೋಧ ಕಾರ್ಯಕ್ಕೆ ತಯಾರಿ ನಡೆದಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗೆ ಶಿವಮೊಗ್ಗದ ಗಜಪಡೆಯೂ ಸಾಥ್ ನೀಡಿತ್ತು.
ಇದನ್ನೂ ಓದಿ | ಬೃಹತ್ ಆಪರೇಷನ್‌ಗೂ ಸಿಗದ ಬೆಳಗಾವಿ ಚಿರತೆ, ಹಾಗಿದ್ದರೆ ಗಾಲ್ಫ್ ಮೈದಾನ ಪ್ರದೇಶ ಬಿಟ್ಟು ಹೋಗಿದ್ಯಾ?