Site icon Vistara News

Hassan News: ಕುಡಿತದ ಬಾಜಿ ಕಟ್ಟಿ ಪ್ರಾಣ ಕಳೆದುಕೊಂಡ ವ್ಯಕ್ತಿ; 10 ಪ್ಯಾಕೆಟ್‌ ಮದ್ಯ ಕುಡಿಯುವ ಚಾಲೆಂಜ್!

Thimmegowda

ಹಾಸನ: ಕುಡಿತದ ಬಾಜಿ ಕಟ್ಟಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ನಡೆದಿದೆ. ಅರ್ಧ ಗಂಟೆಯಲ್ಲಿ 90 ಎಂಎಲ್‌ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದ‌ ವ್ಯಕ್ತಿ, ಕುಡಿದ ಬಳಿಕ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ.

ತಿಮ್ಮೇಗೌಡ (60) ಮೃತರು. ದೇವರಾಜ್ ಎಂಬಾತನ ಜತೆ ತಿಮ್ಮೇಗೌಡ ಬೆಟ್ಟಿಂಗ್‌ ಕಟ್ಟಿದ್ದ. 30 ನಿಮಿಷದಲ್ಲಿ 90 ಮಿ.ಲೀ.ನ 10 ಪ್ಯಾಕೆಟ್‌ ಮದ್ಯ ಕುಡಿಯುವ ಚಾಲೆಂಜ್‌ನಲ್ಲಿ ಗೆಲ್ಲಲು ಇಬ್ಬರೂ ಮದ್ಯ ಸೇವಿಸಿದ್ದರು. ನಂತರ ತಿಮ್ಮೇಗೌಡ ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ಅಸ್ವಸ್ಥರಾಗಿ ಬಿದ್ದಿದ್ದ. ಆತನನ್ನು ಗ್ರಾಮಸ್ಥರು ಮನೆಗೆ ಕರೆದೊಯ್ದು ಬಿಟ್ಟಿದ್ದರು.

ಇದನ್ನೂ ಓದಿ | Chandrayaan 3: ರಸ್ತೆ ಬದಿಯಲ್ಲಿ ಇಡ್ಲಿ ಮಾರುತ್ತಿರುವ ಚಂದ್ರಯಾನ-3 ತಂತ್ರಜ್ಞ! ಕಂಪನಿ 18 ತಿಂಗಳಿಂದ ವೇತನ ನೀಡಿಲ್ಲ!

ತಿಮ್ಮೇಗೌಡನ ಕುಟುಂಬಸ್ಥರು ಗಣೇಶ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ತಿಮ್ಮೇಗೌಡ ಮನೆಯಲ್ಲೇ ಮೃತಪಟ್ಟಿದ್ದಾನೆ.‌ ಈ ಸಂಬಂಧ ಬೆಟ್ಟಿಂಗ್ ಕಟ್ಟಿದ್ದ ದೇವರಾಜ್ ಹಾಗೂ ಮದ್ಯದ ಪ್ಯಾಕೆಟ್‌ ನೀಡಿದ್ದ ಕೃಷ್ಣೇಗೌಡ ಎಂಬುವವರ ವಿರುದ್ಧ ಮೃತ ತಿಮ್ಮೇಗೌಡರ ಪುತ್ರಿ ದೂರು ನೀಡಿದ್ದಾರೆ.

Exit mobile version