ಚಿಕ್ಕಮಗಳೂರು: ಆತ್ಮಹತ್ಯೆಗೆ ಶರಣಾಗಿದ್ದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಜ.14ರಂದು ಮೃತಪಟ್ಟಿದ್ದಾರೆ. ಸಾವಿನ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದಿದ್ದ ಬಾಲಕಿ, ತನ್ನ ಸಾವಿಗೆ 25 ವರ್ಷದ ನಿತೇಶ್ ಕಾರಣ ಎಂದು ತಿಳಿಸಿದ್ದಾಳೆ. ನಿತೇಶ್ ಬಿಜೆಪಿ ಪಕ್ಷದ ಕಾರ್ಯಕರ್ತ ಎನ್ನಲಾಗುತ್ತಿದೆ(Suicide Case).
ನಿತೇಶ್ ಎಂಬಾತ 17 ವರ್ಷದ ದೀಪ್ತಿಯನ್ನು ಪ್ರೀತಿಸುವ ನಾಟಕವಾಗಿ, ವಂಚಿಸಿದ್ದ. ಅಲ್ಲದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮೃತ ವಿದ್ಯಾರ್ಥಿನಿ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಳು.
ದೀಪ್ತಿ ಜನವರಿ 10ರಂದು ಕಳೆ ನಾಶ ಸೇವಿಸಿದ್ದಳು. ನಂತರ ಆಕೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜನವರಿ 14ರಂದು ಮೃತಪಟ್ಟಿದ್ದಾಳೆ. ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಳು.
ಚಿಕ್ಕಮಗಳೂರು ಎಸ್‌ಪಿ ಗರಂ
ಡೆತ್‌ನೋಟ್‌ನಲ್ಲಿ ಹೆಸರಿಸಿದಂತೆ, ಬಿಜೆಪಿ ಕಾರ್ಯಕರ್ತ ಎನ್ನಲಾದ ನಿತೇಶ್ ವಿರುದ್ಧ ದೂರು ದಾಖಲಿಸಲು ಕುದುರೆಮುಖ ಪೊಲೀಸರು ಸತಾಯಿಸುತ್ತಿದ್ದರು. ಹುಡುಗಿಯ ಪೋಷಕರು ನೀಡಿದ ದೂರನ್ನು ಸ್ವೀಕರಿಸದ ಕುದುರೆಮುಖ ಪೊಲೀಸರನ್ನು ಚಿಕ್ಕಮಗಳೂರು ಎಸ್‌ಪಿ ತರಾಟೆಗೆ ತೆಗೆದುಕೊಂಡಿದ್ದಾರೆ. ಎಸ್ ಪಿ ಸೂಚನೆ ಬಳಿಕ ನಿತೇಶ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ್ದಾರೆ.
ನಿತೇಶ್ ವಿರುದ್ದ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲು ಪೋಷಕರ ಒತ್ತಾಯಿಸಿದ್ದಾರೆ. ಆದರೆ, ಈವರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಪೊಲೀಸರ ನಿರ್ಲಕ್ಷ್ಯಕ್ಕೆ ದೀಪ್ತಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಬಿಜೆಪಿ ಕಾರ್ಯಕರ್ತ ನಿತೇಶ್ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.ೇ
ಇದನ್ನೂ ಓದಿ | Lovers suicide | ಪ್ರೀತಿಗೆ ಮನೆಯಲ್ಲಿ ವಿರೋಧ: ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು