ಕೊಪ್ಪಳ : ರಾಜ್ಯಾದ್ಯಂತ ಶುಕ್ರವಾರ (ಆ.5) ವರಮಹಾಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಹಬ್ಬದ ನಿಮಿತ್ತ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ಲಿಂ ಕುಟುಂಬದ ಮಂದಿ, ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ನಜೀರುದ್ದೀನ್ ಬಿಸರಳ್ಳಿ ಕುಟುಂಬದಿಂದ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆದಿದೆ. ಪೂಜೆಯಲ್ಲಿ ಮನೆಗೆ ತಳಿರು ತೋರಣ ಕಟ್ಟಿ, ದೇವರ ಪ್ರತಿಷ್ಠಾಪನೆ ಮಾಡುವ ಸ್ಥಳಕ್ಕೆ ದೀಪಾಲಂಕಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹೋಳಿಗೆ ನೈವೇದ್ಯ ಮಾಡಿ ಭಕ್ತಿಯಿಂದ ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿದ್ದಾರೆ. ಹಾಗೂ ಆಪ್ತರನ್ನು ಕರೆದು ಮುಸ್ಲಿಂ ಕುಟುಂಬ ಊಟ ಬಡಿಸಿದೆ .
ಇದನ್ನೂ ಓದಿ | ವರಮಹಾಲಕ್ಷ್ಮೀ ಹಬ್ಬ | ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ