ಮಂಗಳೂರು: ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಇಳಿದು ಮೂಲಕ ಕೇರಳಕ್ಕೆ ತೆರಳಿದ್ದ ವ್ಯಕ್ತಿಗೆ ಮಂಕಿ ಫಾಕ್ಸ್ (Monkeypox) ಪಾಸಿಟಿವ್ ಬಂದಿದೆ. ಬುಧವಾರ (ಜು.13) ದುಬೈನಿಂದ ಮಂಗಳೂರಿಗೆ ಬಂದ ಪ್ರಯಾಣಿಕನಿಗೆ ಸೋಂಕು ತಗುಲಿರುವುದು ಕಂಡು ಬಂದಿದೆ. ಕೇರಳದ ಕಣ್ಣೂರಿನ ಆ ವ್ಯಕ್ತಿಗೆ ಜ್ವರ ಹಾಗೂ ಮೈ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಿವೆ. ವೈದ್ಯರ ಬಳಿ ತೆರಳಿ ಪರೀಕ್ಷಿಸಿದಾಗ ಇದು ಮಂಕಿ ಫಾಕ್ಸ್ ಎನ್ನುವುದು ಖಚಿತವಾಗಿದೆ.
ಇದನ್ನೂ ಓದಿ| Monkeypox | ಕರ್ನಾಟಕಕ್ಕೆ ಮಂಕಿಪಾಕ್ಸ್ ಆತಂಕ: ರಾಜ್ಯದ 21 ಪ್ರಯಾಣಿಕರ ಮೇಲೆ ನಿಗಾ
ದುಬೈನಿಂದ ನೇರ ಮಂಗಳೂರಿಗೆ ಬಂದಿದ್ದ ವಿಮಾನದಲ್ಲಿ 191 ಪ್ರಯಾಣಿಕರು ಆಗಮಿಸಿದ್ದರು. ಮಂಕಿ ಫಾಕ್ಸ್ ಪತ್ತೆಯಾದ ವ್ಯಕ್ತಿಯ ಜತೆ ಹಾಗೂ ಅಕ್ಕಪಕ್ಕದ ಸೀಟಿನಲ್ಲಿದ್ದ 35 ಜನರನ್ನು ಗುರುತಿಸಲಾಗಿದೆ. ಇವರಿಗೆ ಪ್ರತ್ಯೇಕ ವಾಸವಾಗಿರುವಂತೆ ಸೂಚಿಸಲಾಗಿದೆ. ಇವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15 ,ಉಡುಪಿಯ 6 ಮತ್ತು ಕೇರಳದ 13 ಮಂದಿ ಸೇರಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೂ 21 ದಿನ ಪ್ರತ್ಯೇಕ ವಾಸವಿರುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ | Monkeypox: ಕೇರಳದಲ್ಲಿ ಪತ್ತೆಯಾಯ್ತು ಮತ್ತೊಂದು ಮಂಕಿಪಾಕ್ಸ್ ಪ್ರಕರಣ; ದೇಶದಲ್ಲಿದು 2ನೇ ಕೇಸ್