ಬೆಂಗಳೂರು: ಹಿರಿಯ ಪತ್ರಕರ್ತ, ಜನಪ್ರಿಯ ಲೇಖಕ ಎ.ಆರ್.ಮಣಿಕಾಂತ್ ಅವರ ಹೊಸ ಪುಸ್ತಕ ‘ಮತ್ತೆ ಹಾಡಿತು ಕೋಗಿಲೆ’ ಅಕ್ಟೋಬರ್ 24ರ ಸೋಮವಾರ ಮಾರುಕಟ್ಟೆಗೆ (book release) ಬರಲಿದೆ. ಸರಳ, ಸುಲಲಿತ ಮತ್ತು ಹೃದಯಸ್ಪರ್ಶಿ ಭಾಷೆಯ ನಿರೂಪಣೆ ಈ ಕೃತಿಯಲ್ಲಿದೆ. ನೀಲಿಮಾ ಪ್ರಕಾಶನವು ಈ ಪುಸ್ತಕವನ್ನು ಹೊರತಂದಿದೆ.
ಈ ಕೃತಿಯಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಇಷ್ಟವಾಗುವ 31 ಸ್ಫೂರ್ತಿದಾಯಕ ಕಥೆಗಳು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಸ್ಮರಣೀಯ ನಿಜಘಟನೆಗಳು, ನೀತಿಬೋಧಕ ಪ್ರಸಂಗಗಳು, ಯಾರೊಬ್ಬರ ಸಹಾಯ ಪಡೆಯದೆ ಅನನ್ಯ ಸಾಧನೆ ಮಾಡಿರುವ ಮಾದರಿ ವ್ಯಕ್ತಿಗಳ ಕಥೆಗಳಿವೆ.
ನವ ಕರ್ನಾಟಕ, ಸಪ್ನಾ ಬುಕ್ ಹೌಸ್, ವಸಂತ ಪ್ರಕಾಶನ, ವೀರಲೋಕ ಬುಕ್ಸ್, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ, ವಿದ್ಯಾಮಂದಿರ ಬುಕ್ ಹೌಸ್ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅಕ್ಟೋಬರ್ 24ರಿಂದ “ಮತ್ತೆ ಹಾಡಿತು ಕೋಗಿಲೆ” ದೊರೆಯಲಿದೆ. ಆನ್‌ಲೈನ್ ಬುಕಿಂಗ್ ಕೂಡ ಇದೆ ಎಂದು ನೀಲಿಮಾ ಪ್ರಕಾಶನದ ಪ್ರಕಟಣೆ ತಿಳಿಸಿದೆ. ಒಟ್ಟು 180 ಪುಟಗಳು ಇರಲಿದ್ದು, 160 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.
ನೀಲಿಮಾ ಪ್ರಕಾಶನವು ಹೊರತಂದಿರುವ ಇದೇ ಲೇಖಕರ “ಅಮ್ಮ ಹೇಳಿದ ಎಂಟು ಸುಳ್ಳುಗಳುʼ, “ಅಪ್ಪ ಅಂದ್ರೆ ಆಕಾಶʼ, “ಭಾವತೀರಯಾನʼ, “ಮನಸು ಮಾತಾಡಿತುʼ ಹಾಗೂ “ನವಿಲುಗರಿʼ ಪುಸ್ತಕಗಳು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ, ದಾಖಲೆ ಮಾರಾಟವನ್ನು ಕಂಡಿತ್ತು.
ಇದನ್ನೂ ಓದಿ | NCF | 3-6 ವರ್ಷದ ಮಕ್ಕಳ ಕಲಿಕೆಗೆ ಪಠ್ಯಪುಸ್ತಕ ಅಗತ್ಯವಿಲ್ಲ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಉಲ್ಲೇಖ