ಬೆಂಗಳೂರು: ನಗರದಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾ (Aero India 2023) ಆಯೋಜನೆ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕೇಂದ್ರ ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಿಂದ 14ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಯಲಹಂಕದ ವಾಯುಪಡೆ ಸ್ಟೇಷನ್‌ನಲ್ಲಿ 2023ರ ಫೆಬ್ರವರಿ 13 ರಿಂದ 17ರವರೆಗೆ ಆಯೋಜಿಸಲಾಗಿದೆ. ಹೀಗಾಗಿ ವೈಮಾನಿಕ ಪ್ರದರ್ಶನದ ಸಿದ್ಧತೆಗಳ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳ ತಂಡ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿತ್ತು.
ಜಾಗತಿಕವಾಗಿ ತನ್ನದೇ ಆದ ಖ್ಯಾತಿ ಪಡೆದಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ೧996ರಿಂದ 13 ಆವೃತ್ತಿಗಳು ಯಶಸ್ವಿಯಾಗಿ ಆಯೋಜನೆಗೊಂಡಿವೆ. ಡಿಐಪಿ ಜಂಟಿ ಕಾರ್ಯದರ್ಶಿ ಅನುರಾಗ್ ಬಾಜಪೇಯ್, ರಕ್ಷಣಾ ಪ್ರದರ್ಶನ ಸಂಸ್ಥೆ ವಿಎಸ್‌ಎಂನ ಸಿಇಒ ಸಿ.ಡಿ. ಅಚಲ್ ಮಲ್ಹೋತ್ರಾ , ಎಚ್‌ಎಎಲ್‌ನ ಸಿಎಂಡಿ ಸಿ.ಬಿ.ಅನಂತಕೃಷ್ಣನ್ ಸೇರಿ ರಕ್ಷಣಾ ಸಚಿವಾಲಯದ ತಂಡವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದೆ.
ಇದನ್ನೂ ಓದಿ | ರಕ್ಷಣಾ ವಲಯದ ಆತ್ಮನಿರ್ಭರತೆಗೆ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-2027 ಸಹಕಾರಿ: ಸಚಿವ ಡಾ. ಸುಧಾಕರ್