ಭಾರತದಲ್ಲಿ ರಕ್ಷಣಾ ವಲಯದ ಉದ್ದಿಮೆಗೆ ಸರ್ಕಾರ ಉತ್ತೇಜನ ಮುಂದುವರಿಸಲಿದೆ. ಇದು ದೇಶವನ್ನು ಸ್ವಾವಲಂಬಿಯಾಗಿಸುವುದಲ್ಲದೆ, ಉದ್ಯೋಗ ಸೃಷ್ಟಿಗೆ ಕೂಡ ಸಹಕಾರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Aero India 2023) ವಿವರಿಸಿದ್ದಾರೆ.
ತುಮಕೂರಿನಲ್ಲಿರುವ ಎಚ್ಎಎಲ್ನ ಘಟಕದಲ್ಲಿ 40 ಹೆಲಿಕಾಪ್ಟರ್ಗಳನ್ನು ತಯಾರಿಸಲು ಸಿದ್ಧತೆ ನಡೆದಿದೆ. ಹೆಲಿಕಾಪ್ಟರ್ ಉತ್ಪಾದನೆಗೆ ಹೇರಳ ಬೇಡಿಕೆ ಬಂದಿದೆ ಎಂದು ಸಂಸ್ಥೆಯ ಸಿಎಂಡಿ ಅನಂತ ಕೃಷ್ಣನ್ (Aero India 2023) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ಶೋದಲ್ಲಿ ಎಚ್ಎಎಲ್ನ HLFT -42 ಯುದ್ಧ ವಿಮಾನದ ಮಾದರಿಯಲ್ಲಿ ಹನುಮಂತನ ಚಿತ್ರ ಇತ್ತು. ಅದನ್ನು ಈಗ ತೆರವುಗೊಳಿಸಲಾಗಿದೆ. (Aero India 2023) ಏನು-ಏಕೆ ಎಂಬುದರ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದಲ್ಲಿ ಅಮೆರಿಕದ ಅತ್ಯಾಧುನಿಕ F-35 ಯುದ್ಧ (Aero India 2023) ವಿಮಾನಗಳು ಭಾಗವಹಿಸಿವೆ. ಜತೆಗೆ ಅಮೆರಿಕದ (Aero India 2023) ಅತಿ ದೊಡ್ಡ ತಂಡ ಬಂದಿಳಿದಿದೆ. ಇದು ಗಮನಾರ್ಹ.
ಏರೋ ಇಂಡಿಯಾ (aero india 2023) ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿ. ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಏರೋ ಶೋ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.
ಏರೋ ಇಂಡಿಯಾದಲ್ಲಿ (Aero India 2023) ಭಾಗವಹಿಸಿರುವ ಅರ್ಜೆಂಟೀನಾ ಮತ್ತು ಮಲೇಷ್ಯಾದ ರಕ್ಷಣಾ ಪಡೆಯ ನಿಯೋಗವು ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಅನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿರುವುದು ಗಮನಾರ್ಹ.
ಏರೋ ಇಂಡಿಯಾ ಈ ಹಿಂದೆ ಒಂದು ಶೋ ರೀತಿಯಲ್ಲಿ ಮಾತ್ರ ನಡೆಯುತ್ತಿತ್ತು, ಇಂದು ಭಾರತದ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.