ಶಿವಮೊಗ್ಗ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಕ್ಕೆ ಹೋಗುವ ಶಂಕರಘಟ್ಟ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಆಕಸ್ಮಿಕವಾಗಿ ರಸ್ತೆ ಬಳಿ ಬಂದ ಹುಲಿಯನ್ನು ಕಂಡು ವಾಹನ ಸವಾರರು ಭಯಭೀತರಾಗಿದ್ದಾರೆ.
ಭದ್ರಾ ಅಭಯಾರಣ್ಯ ಪ್ರದೇಶದಲ್ಲಿರುವ ಶಂಕರಘಟ್ಟ ರಸ್ತೆಯಲ್ಲಿ ಅಪರೂಪಕ್ಕೆ ಹುಲಿ ಪ್ರತ್ಯಕ್ಷಗೊಂಡಿದೆ. ಆದರೆ, ಯಾರಿಗೂ ತೊಂದರೆ ಕೊಡದಂತೆ ರಾಜ ಗಾಂಭೀರ್ಯದಿಂದ ರಸ್ತೆ ದಾಟಿಕೊಂಡು ಹೋಗಿದೆ. ಇನ್ನು ದಿಢೀರನೇ ಹುಲಿ ಬಂದದನ್ನು ಕಂಡ ಜನರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಬಳಿಕ ಹುಲಿ ರಸ್ತೆ ದಾಟಿ ಸಾಗುತ್ತಿರುವ ದೃಶ್ಯವನ್ನು ಕ್ಯಾಮರಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.