Site icon Vistara News

ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ, ಆರೋಪಿ ವಿರುದ್ಧ ಕೇಸ್

A woman was sexually harassed in a flight coming to Bangalore from Frankfurt

ಬೆಂಗಳೂರು: ವಿಮಾನದಲ್ಲಿ (Flight) ಮಹಿಳೆಯೊಬ್ಬಳಿಗೆ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ (Sexual Harassment) ನೀಡಿದ ಘಟನೆ ನಡೆದಿದೆ. ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ (Frankfurt to Bengaluru) ಈ ಘಟನೆ ನಡೆದಿದ್ದು, ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಲುಪ್ತಾನ್ಸ ಏರ್ಲೈನ್ಸ್ LH 0754 ವಿಮಾನ ಪ್ರಯಾಣಿಸುತ್ತಿತ್ತು. ಈ ವಿಮಾನದಲ್ಲಿದ್ದ ತಿರುಪತಿ ಮೂಲದ ಮಹಿಳೆಯ ಮೇಲೆ ಪುರುಷ ಪ್ರಯಾಣಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಹಿಳೆಯ ಪಕ್ಷದ ಸೀಟಿನಲ್ಲಿದ್ದ ಆರೋಪಿ, ಆಕೆ ಮಲಗಿದ ಸಮಯದಲ್ಲಿ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಆರೋಪಿ ಪ್ರಯಾಣಿಕನನ್ನು ಬೆಂಗಳೂರಿನ ರಂಗನಾಥ್ ಎಂದು ಗುರುತಿಸಲಾಗಿದೆ.

ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಂತ್ರಸ್ತೆ ಮಹಿಳೆಯು ಆರೋಪಿ ರಂಗನಾಥ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕವಾಗಿ ಕಿರುಕುಳ ನೀಡುವುದು ಮತ್ತು ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಈ ಸಾಲಿಗೆ ಈಗ ಹೊಸ ಪ್ರಕರಣ ಸೇರ್ಪಡೆಯಾಗಿದೆ.

ಕೆಲವು ತಿಂಗಳ ಹಿಂದೆ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದ್ದವು. ವಿಮಾನದ ಪ್ರಯಾಣದ ವೇಳೆ, ಸಹ ಪ್ರಯಾಣಿಕರರ ಮೇಲೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿ ಜೈಲು ಕಂಬಿ ಎಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಸುದ್ದಿಯನ್ನೂ ಓದಿ: Madrasa Maulana: ಮದರಸಾದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೌಲ್ವಿ; ಅಕ್ಷರ ಕಲಿಸುವ ಹೆಸರಲ್ಲಿ ಅನಾಚಾರ!

Exit mobile version