ಕೊಡಗು: ಜಿಲ್ಲೆಯ ಮೈತಾಡಿ ಗ್ರಾಮದಲ್ಲಿ ಡಬಲ್ ಬ್ಯಾರೆಲ್ ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿರಾಜಪೇಟೆ ಪಟ್ಟಣದ ಹೊರವಲಯದ ಮೈತಾಡಿ ಗ್ರಾಮಸ್ಥ ಶರತ್ ಪೂವಯ್ಯ (33) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮನೆಯ ಬಳಿಯೇ ಡಬಲ್ ಬ್ಯಾರೆಲ್ ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | PFIಗೆ CCB ಶಾಕ್ | ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಬಂಧಿತರಾದ 14 ಪಿಎಫ್ಐ ಮುಖಂಡರಿಗೆ 11 ದಿನ ಪೊಲೀಸ್ ಕಸ್ಟಡಿ