ಬೆಂಗಳೂರು: ನೀವೀಗ ನಿಮ್ಮ ಆಧಾರ್ ಕಾರ್ಡ್‌ನಲ್ಲಿ (Aadhaar Card) ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದು (Aadhaar update for free). ಆದರೆ, ಈ ಸೌಲಭ್ಯ ಇನ್ನು ಮೂರು ದಿನ ಮಾತ್ರವೇ ಅವಕಾಶ ಇದೆ. ಅಂದರೆ, ಡಿಸೆಂಬರ್ 14ರ ವರೆಗೆ ಉಚಿತ ಅಪ್ಡೇಟ್‌ಗೆ ಅವಕಾಶ ಕಲ್ಪಿಸಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆನ್‌ಲೈನ್ ಆಧಾರ್ ನವೀಕರಣಗಳಿಗಾಗಿ (online Aadhaar update) ಇಟ್ಟಿದ್ದ ರೂ. 50ರ ಸಾಮಾನ್ಯ ಶುಲ್ಕವನ್ನು ಡಿ.14ರವರೆಗೆ ಮನ್ನಾ ಮಾಡಿದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. ಇನ್ನೂ ಅಪ್ಡೇಟ್ ಮಾಡಿಲ್ಲವಾದರೆ ಕೂಡಲೇ ಮಾಡಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಇದರ ನಂತರ, ನೀವು ಶುಲ್ಕ ಪಾವತಿಸಿ ಅಪ್ಡೇಟ್ ಮಾಡಿಕೊಳ್ಳಬೇಕು.
ಆದರೆ ಭಾವಚಿತ್ರ, ಐರಿಸ್ ಅಥವಾ ಇತರ ಬಯೋಮೆಟ್ರಿಕ್ (Biometric details) ವಿವರಗಳನ್ನು ನವೀಕರಿಸಲು ಬಯಸಿದರೆ, ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಅಗತ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಏಕೆಂದರೆ ಬಯೋಮೆಟ್ರಿಕ್ ಅಪ್‌ಡೇಟ್‌ಗಳಿಗೆ ಫಿಂಗರ್‌ಪ್ರಿಂಟ್‌ಗಳು, ಐರಿಸ್ ಮತ್ತು ಇತರ ಬಯೋಮೆಟ್ರಿಕ್ ಡೇಟಾ ಸ್ಕ್ಯಾನಿಂಗ್ ಅಗತ್ಯವಿದೆ. ಇದನ್ನು ದಾಖಲಾತಿ ಕೇಂದ್ರಗಳಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ಸ್ಕ್ಯಾನಿಂಗ್ ಯಂತ್ರಗಳೊಂದಿಗೆ ಮಾತ್ರ ಮಾಡಬಹುದು. ಜತೆಗೆ ವಂಚನೆ ತಡೆಯಲು ಕೂಡ ಬಯೋಮೆಟ್ರಿಕ್ ಪರಿಶೀಲನೆ ಅಗತ್ಯವಿದೆ.
ಆಧಾರ್ ಏಕೆ ನವೀಕರಿಸಬೇಕು?
ಆಧಾರ್‌ನ ಆಡಳಿತ ಮಂಡಳಿ UIDAI, ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ಡೇಟಾಬೇಸ್‌ನಲ್ಲಿನ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ.
ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೊಸ ಸ್ಥಳಗಳಿಗೆ ವಲಸೆ ಹೋದಾಗ ಬದಲಾಗಬಹುದು.
ಇದರ ಜೊತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಎಲ್ಲ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕು. ಇದು ಮಗುವಿನ ಆಧಾರ್ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತದೆ.
ಯಾಕೆ ಮುಖ್ಯ?
- ವಂಚನೆ ಮತ್ತು ಆಧಾರ್ ದುರುಪಯೋಗವನ್ನು ತಡೆಗಟ್ಟಲು.
- ಆಧಾರ್ ದೃಢೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು.
- ಸರ್ಕಾರವು ಒದಗಿಸುವ ಆಧಾರ್-ಸಂಬಂಧಿತ ಸೇವೆಗಳನ್ನು ಸುಧಾರಿಸಲು.
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡುವುದು ಹೇಗೆ?
UIDAI ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿ. ಲಾಗ್ ಇನ್ ಆಗಿ ಅಪ್‌ಡೇಟ್ ವಿನಂತಿ ಸಲ್ಲಿಸಿದರೆ, UIDAI ವಿನಂತಿಯನ್ನು ಪರಿಶೀಲಿಸುತ್ತದೆ ಮತ್ತು 15 ದಿನಗಳಲ್ಲಿ ಆಧಾರ್ ವಿವರಗಳನ್ನು ನವೀಕರಿಸುತ್ತದೆ.
ಇದನ್ನೂ ಓದಿ: Health Card: ಸರ್ಕಾರದ ಹೊಸ ಹೆಲ್ತ್ ಕಾರ್ಡ್; ದೇಶದ ಎಲ್ಲೆಡೆ ಸಿಗಲಿದೆ Treatment! ಏನಿದರ ವಿಶೇಷತೆ?
UIDAI ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ ಹೋಗಿ.
- ಅಲ್ಲಿ My Aadhar ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಿಂದ “Update Your Aadhaar” ಆಯ್ಕೆ ಮಾಡಿ.
- `Update Aadhaar Details (Online)” ಪುಟದಲ್ಲಿ, “Proceed to Update Aadhaar” ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪರಿಶೀಲನೆ ಕೋಡ್ ಅನ್ನು ನಮೂದಿಸಿ. ನಂತರ “Send OTP” ಕ್ಲಿಕ್ ಮಾಡಿ.
- ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು “Login” ಕ್ಲಿಕ್ ಮಾಡಿ.
- ಮುಂದಿನ ಪುಟದಲ್ಲಿ, ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಿ ಮತ್ತು ಹೊಸ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ, “Submit” ಕ್ಲಿಕ್ ಮಾಡಿ.
- ಅಗತ್ಯವಿರುವ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ ಮತ್ತು “Submit Update Request” ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ನವೀಕರಣ ವಿನಂತಿ ಸಂಖ್ಯೆ (URN) ಸ್ವೀಕರಿಸುತ್ತೀರಿ. ಟ್ರ್ಯಾಕಿಂಗ್ಗಾಗಿ ಈ URN ಅನ್ನು ಇರಿಸಿಕೊಳ್ಳಿ.
- ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ಪರಿಶೀಲಿಸಲು, myaadhaar.uidai.gov.in/ಗೆ ಭೇಟಿ ನೀಡಿ ಮತ್ತು “Check Enrolment & Update Status” ಕ್ಲಿಕ್ ಮಾಡಿ.
- ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ URN ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.