ಮಡಿಕೇರಿ: ಕೊಡಗಿನ ಖ್ಯಾತ ಪ್ರವಾಸಿ ತಾಣ ಅಬ್ಬಿ ಫಾಲ್ಸ್ (Abbey Falls) ನೋಡಲು ಹೋಗುವ ಪ್ರವಾಸಿಗರಿಗೆ ನಿರ್ಬಂಧ ಎದುರಾಗಬಹುದಾ ಎಂಬ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಈ ಸ್ಥಳದ ಮಾಲೀಕರು ಹಾಗೂ ಗ್ರಾಮ ಪಂಚಾಯತ್ ನಡುವೆ ನಡೆದಿರುವ ಸಮರ.
ಅಬ್ಬಿಫಾಲ್ಸ್ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಅಬ್ಬಿ ಫಾಲ್ಸ್ ಪ್ರವೇಶಕ್ಕೆ ಬರುವ ಪ್ರವಾಸಿಗರಿಂದ ಟಿಕೇಟ್ ಹಣ ಸಂಗ್ರಹಕ್ಕೆ ಗ್ರಾಮ ಪಂಚಾಯತ್ ಮುಂದಾಗಿದೆ. ಆದರೆ ಫಾಲ್ಸ್ ಪ್ರವೇಶಕ್ಕೆ ಯಾವುದೇ ಟಿಕೇಟ್ ಇಡದಂತೆ ಸ್ಥಳದ ಮಾಲೀಕರು ಒತ್ತಾಯಿಸಿದ್ದಾರೆ. ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಅಬ್ಬಿ ಜಲಪಾತ ಹಾಗೂ ಹೊಳೆ ಎರಡು ಖಾಸಗಿ ತೋಟಗಳ ನಡುವೆ ಹರಿಯುತ್ತಿದೆ. ಇದು ದಿ.ನೆರವಂಡ ನಾಣಯ್ಯರಿಗೆ ಸೇರಿದ ಪ್ರದೇಶವಾಗಿದೆ. ಉಚಿತ ಪ್ರವೇಶಕ್ಕೆ ಮಾಲಿಕರು ಹಿಂದಿನಿಂದಲೂ ಅವಕಾಶ ಕಲ್ಪಿಸಿದ್ದಾರೆ. ಆದರೆ ಗ್ರಾಮ ಪಂಚಾಯತ್ ಕಳೆದ ನಾಲ್ಕು ತಿಂಗಳಿಂದ ಟಿಕೆಟ್ ಕಲೆಕ್ಟ್ ಮಾಡುತ್ತಿದೆ. ಟಿಕೆಟ್ ಸಂಗ್ರಹಕ್ಕೆ ನಾಣಯ್ಯ ಪುತ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆಯಲ್ಲಿದೆ ಅಬ್ಬಿ ಜಲಪಾತ. ಸದ್ಯ ಟಿಕೇಟ್ ಕೌಂಟರ್ ಮುಚ್ಚಿ ಪ್ರವಾಸಿಗರ ಪ್ರವೇಶಕ್ಕೆ ಮಾಲೀಕರು ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Drowned in water | ಅಬ್ಬಿಫಾಲ್ಸ್‌ಗೆ ಈಜಲು ತೆರಳಿದ್ದ ಯುವಕ ಮುಳುಗಿ ಸಾವು