Site icon Vistara News

Abhishek Ambareesh Reception: ಅಭಿಷೇಕ್- ಅವಿವ ಜೋಡಿಗೆ ಶುಭ ಕೋರಿದ ಗಣ್ಯರು; ಹೇಗಿತ್ತು ನೋಡಿ ವೈಭವದ ಆರತಕ್ಷತೆ!

CM siddaramaiah in Abhishek Ambareesh and Aviva Bidapa reception

#image_title

ಬೆಂಗಳೂರು: ವಿವಾಹ ಜೀವನಕ್ಕೆ ಕಾಲಿಟ್ಟಿರುವ ನವದಂಪತಿ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ (Abhishek Ambareesh Reception) ನಗರದ ಅರಮನೆ ಮೈದಾನದಲ್ಲಿ ಬುಧವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ಚಿತ್ರರಂಗದ ಗಣ್ಯರು ಮತ್ತು ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿ ಪ್ರಮುಖ ರಾಜಕೀಯ ನಾಯಕರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು. ಇದೇ ವೇಳೆ ಅತಿಥಿಗಳಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಜೂನ್‌ 5ರಂದು ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ವಿವಾಹ ನೆರವೇರಿತ್ತು. ಹೀಗಾಗಿ ಬುಧವಾರ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ವೈಟ್ ಶೇರ್ವಾಣಿಯಲ್ಲಿ ಅಭಿ, ಗೋಲ್ಡ್‌ ಕಲರ್ ಸೀರೆಯಲ್ಲಿ ಅವಿವ ಬಿಡಪ ಮಿಂಚುತ್ತಿದ್ದರು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಸ್‌.ಎಂ.ಕೃಷ್ಣ, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ, ಗುಲಾಂ ನಬಿ ಆಜಾದ್, ಸಚಿವ ಕೆ.ಜೆ.ಜಾರ್ಜ್‌ ಸೇರಿ ಹಲವು ರಾಜಕೀಯ ನಾಯಕರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.

ಅದೇ ರೀತಿ ಚಿತ್ರ ರಂಗದ ನಟ, ನಟಿಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತೆಲುಗು ಸ್ಟಾರ್‌ ನಟ ಮೆಗಾಸ್ಟಾರ್‌ ಚಿರಂಜೀವಿ, ನಟ, ರಾಜಕಾರಣಿ ಶತ್ರುಜ್ಞ ಸಿನ್ಹಾ, ಸ್ಯಾಂಡಲ್‌ವುಡ್‌ ನಟ ರವಿಚಂದ್ರನ್‌, ನಟಿ ರಮ್ಯಾ, ತಮಿಳು ನಟ ಪ್ರಭು ಗಣೇಶನ್‌, ರಾಘವೇಂದ್ರ ರಾಜಕುಮಾರ್‌, ನಟಿ ಖುಷ್ಬೂ ಸುಂದರ್‌, ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿ ಹಲವರು ಹಾಜರಾಗಿದ್ದರು.

ಇದನ್ನೂ ಓದಿ | Abhishek Ambareesh Wedding: ಅಭಿಷೇಕ್‌ ಅಂಬರೀಶ್‌-ಅವಿವ ಮದುವೆಯ ಸುಂದರ ಕ್ಷಣಗಳು

ಅದ್ಧೂರಿ ಆರತಕ್ಷತೆಯ ಚಿತ್ರಾವಳಿ

ಇದನ್ನೂ ಓದಿ | Abhishek Ambareesh Wedding: ದೀರ್ಘಕಾಲದ ಗೆಳತಿಗೆ ಮಾಂಗಲ್ಯ ಧಾರಣೆ ಮಾಡಿದ ಅಭಿಷೇಕ್ ಅಂಬರೀಶ್‌


ಅಕರ್ಷಣೀಯ ಕ್ರಿಸ್ಟಲ್‌ ಶಾಗ್ಲಿಯರ್‌ ವೇದಿಕೆ

ವೈಟ್ ಶೆರ್ವಾಣಿಯಲ್ಲಿ ಅಭಿ, ಗೋಲ್ಡ್‌ ಕಲರ್ ಸೀರೆಯಲ್ಲಿ ಅವಿವಾ |Abishek Ambareesh - Aviva Bidapa

ಸುಮಲತಾ ಅಂಬರೀಶ್‌ ಅವರ ಆಸೆಯಂತೇ ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ಅದ್ಧೂರಿಯಾಗಿ ಪರ್ಪಲ್ ಮತ್ತು ಬ್ಲ್ಯೂ ಥೀಮ್​ನಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ವೇದಿಕೆಯನ್ನು ಇಂಡಿಯನ್‌ ಕ್ರಿಸ್ಟಲ್‌ ಶಾಗ್ಲಿಯರ್‌ ವಿನ್ಯಾಸದಲ್ಲಿ 300 ಶಾಗ್ಲಿಯರ್ಸ್‌ ಹಾಗೂ 72 ಅಡಿ ಅಗಲ, 32 ಅಡಿ ಉದ್ದದ ಶಾಗ್ಲಿಯರ್‌ಗಳನ್ನು ಬಳಸಿಕೊಂಡು ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಹೂವು ಹಾಗೂ ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೇಶದಲ್ಲಿ ಇದೇ ಮೊದಲ ಬಾರಿ ಇಂತಹ ವೇದಿಕೆ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಇದೆ.

Exit mobile version