ಬೆಂಗಳೂರು: ಸಂಶಯ ಪಿಶಾಚಿ ಗಂಡನ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬರು ಠಾಣೆ (Abuse Case) ಮೆಟ್ಟಿಲೇರಿದ್ದಾರೆ. ನನ್ನ ಮೇಲೆ ಅನುಮಾನ ಪಟ್ಟು ನನ್ನ ಪತಿ ಕಾರಿಗೆ ಜಿಪಿಎಸ್ ಅಳವಡಿಸಿದ್ದಾನೆ ಎಂದು ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಲ್ಲಿ ನಡೆದಿದೆ.
ಕಾಕ್ಸ್‌ಟೌನ್‌ನಲ್ಲಿ ವಾಸವಿರುವ ಏಂಜಲೀನ್ ಎಂಬಾಕೆ ತನ್ನ ಪತಿ ಸಂದೀಪ್ ಗುಪ್ತಾ ವಿರುದ್ಧ ದೂರು ನೀಡಿದ್ದಾರೆ. ಕಳೆದ ಹಲವು ತಿಂಗಳಿಂದ ಪತಿ ಸಂದೀಪ್ ಗುಪ್ತಾ ತೊಂದರೆ ನೀಡುತ್ತಿದ್ದಾರೆ. ಕಳೆದ ನ. 1ರಂದು ಸಂದೀಪ್ ಗುಪ್ತಾ ಹಾಗೂ ತಾಯಿ ರಿಟಾ ಗುಪ್ತಾ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಸಲ್ಲದು ಎಂಬಂತೆ ಹಲ್ಲೆ ಮಾಡಿ ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ. ಪ್ರಾಣ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿದ್ದಾರೆ.
ಪ್ರತಿ ದಿನವೂ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಸಂದೀಪ್, ಇತ್ತೀಚೆಗೆ ನನಗೆ ತಿಳಿಯದ ಹಾಗೇ ಕಾರಿಗೆ ಜಿಪಿಎಸ್ ಅಳವಡಿಸಿದ್ದಾರೆ. ಅನುಮಾನ ಪಟ್ಟು ನನ್ನ ಚಲನವಲನದ ಬಗ್ಗೆ ನಿಗಾ ಇಟ್ಟು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸದ್ಯ ಮಗನ ಜತೆ ಸೇರಿ ಅತ್ತೆ ರಿಟಾ ಗುಪ್ತ ಕಿರುಕುಳ ನೀಡುತ್ತಿದ್ದು, ಇವರ ಮೇಲೆ ಕಾನೂನು ರೀತ್ಯಾ ಕ್ರಮವಹಿಸುವಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Accident Case : ಕಾರ್ ಪಾರ್ಕಿಂಗ್ ಮಾಡುವಾಗ ಓಡಿ ಬಂದ ಮಗು; ಚಕ್ರದಡಿ ಸಿಲುಕಿ ಮೃತ್ಯು
ಸ್ಕೂಟರ್ ಅಡ್ಡಗಟ್ಟಿ ಯುವತಿ ಬಟ್ಟೆ ಹಿಡಿದು ಎಳೆದಾಡಿದ ಕಾಮುಕ!
ಬೆಂಗಳೂರು: ರಾತ್ರಿ ಕೆಲಸ ಮುಗಿಸಿ ಮನೆಗೆ ಸ್ಕೂಟರ್‌ನಲ್ಲಿ ವಾಪಸ್ ಆಗುತ್ತಿದ್ದ ಯುವತಿಯನ್ನು ಕಾಮುಕನೊಬ್ಬ (Physical Abuse) ಹಿಂಬಾಲಿಸಿದ್ದಾನೆ. ಬಳಿಕ ಒಮ್ಮೆಲೆ ಸ್ಕೂಟರ್‌ಗೆ ಅಡ್ಡಗಟ್ಟಿದ್ದಾನೆ. ನಂತರ ನಡುರಸ್ತೆಯಲ್ಲೇ ಯುವತಿಯ ಬಟ್ಟೆಯನ್ನು ಹಿಡಿದು ಎಳೆದಾಡಿದ್ದಾನೆ.
ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ ಬಳಿ ಇರುವ ಉಪ ಪೊಲೀಸ್ ಆಯುಕ್ತರ ಕಚೇರಿ ಸಮೀಪವೇ ಈ ದುರ್ಘಟನೆ ನಡೆದಿದೆ. ಯುವತಿ ಕೆಲಸ ಮುಗಿಸಿ ರಾತ್ರಿ ಸುಮಾರು 10:40ರ ಸುಮಾರಿಗೆ ಕೂಡ್ಲುಗೇಟ್‌ನಿಂದ ಬಸವನಗುಡಿ ಕಡೆ ಬರುತ್ತಿದ್ದರು.
ಈ ವೇಳೆ ವೈಟ್ ಸ್ವೆಟ್ ಶರ್ಟ್ ಹಾಗೂ ಹ್ಯಾಟ್ ಧರಿಸಿಕೊಂಡು ಬಂದಿದ್ದ ಅಪರಿಚಿತನೊಬ್ಬ ಯುವತಿಯನ್ನು ಸ್ವಲ್ಪ ದೂರ ಹಿಂಬಾಲಿಸಿದ್ದಾನೆ. ಬಳಿಕ ಸೌತ್ ಎಂಡ್ ಸರ್ಕಲ್ ಬಳಿ ಏಕಾಏಕಿ ಅಡ್ಡಗಟ್ಟಿ ಬಳಿಕ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಾತ್ರವಲ್ಲದೆ ಯುವತಿ ಕಿರುಚಾಡಲು ಶುರು ಮಾಡುತ್ತಿದ್ದಂತೆ ಅಶ್ಲೀಲ ಪದಗಳಿಂದ ನಿಂದಿಸಿ ಕಾಮುಕ ಪರಾರಿ ಆಗಿದ್ದಾನೆ. ಸದ್ಯ ಯುವತಿ ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಕಾಮುಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ