Site icon Vistara News

Road accident | ಅಪಘಾತದಲ್ಲಿ ಹೊತ್ತಿ ಉರಿದ ಬೊಲೆರೊ, ಬೈಕ್‌ನಲ್ಲಿದ್ದ ಇಬ್ಬರ ದಾರುಣ ಮೃತ್ಯು

Gadad accident bolero

ಗದಗ: ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಳಿ ಬೈಕ್ ಹಾಗೂ ಬೊಲೆರೊ ನಡುವೆ‌ ಸಂಭವಿಸಿದ ಭೀಕರ ಅಪಘಾತದಲ್ಲಿ ಬೊಲೆರೊ ಸುಟ್ಟು ಕರಕಲಾದರೆ ಬೈಕ್‌ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ.

KA 03 G-1466 ಸಂಖ್ಯೆಯ ಕಾರು ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸುತ್ತಿದ್ದಂತೆಯೇ ಬೈಕ್‌ ಉರುಳಿ ಬಿದ್ದಿದೆ. ಬೈಕ್‌ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪಘಾತದಿಂದ ಹೊತ್ತಿ ಉರಿಯುತ್ತಿರುವ ಬೊಲೆರೊ

ಈ ನಡುವೆ ಅಪಘಾತಕ್ಕೆ ಒಳಗಾದ ಬೊಲೆರೊ ವಾಹನಕ್ಕೆ ಬೆಂಕಿ ಹತ್ತಿಕೊಂಡಿದ್ದು ವಾಹನ ಸುಟ್ಟು ಹೋಗಿದೆ. ಆದರೆ, ಅದಕ್ಕಿಂತ ಮೊದಲೆ ಅದರಲ್ಲಿದ್ದವರು ಕೆಳಕ್ಕೆ ಜಿಗಿದ ಹಿನ್ನೆಲೆಯಲ್ಲಿ ಜೀವಾಪಾಯದಿಂದ ಪಾರಾದರು. ಅದರೆ, ಅವರೆಲ್ಲರೂ ಅಲ್ಲಿಂದ ಪರಾಗಿಯಾಗಿದ್ದಾರೆ.

ಬೈಕ್‌ನಲ್ಲಿ ಹೋಗುತ್ತಿದ್ದು, ಮೃತಪಟ್ಟವರು ಯಾರು? ಕಾರಿನಲ್ಲಿದ್ದವರು ಯಾರು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ‌‌ ದಾಖಲಾಗಿದೆ.

ಇದನ್ನೂ ಓದಿ | Road accident | ಟ್ರ್ಯಾಕ್ಟರ್‌ – ಬೈಕ್‌ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಸಾವು

Exit mobile version